ಬಾಲಿವುಡ್ ನಟಿ ರಾಖಿ ಸಾವಂತ್ ಮತ್ತು ಮೈಸೂರು ಹುಡುಗ ಆದಿಲ್ ನಡುವಿನ ಗಲಾಟೆ ಕೇವಲ ಹಾದಿರಂಪ ಬೀದಿರಂಪದಲ್ಲೇ ಮುಗಿಯಲಿದೆ ಎಂದು ನಂಬಲಾಗಿತ್ತು. ಆದರೆ, ಅದು ಪೊಲೀಸ್ ಸ್ಟೇಶನ್ ಮೆಟ್ಟಿಲು ಏರಿ, ಇದೀಗ ಆದಿಲ್ ನನ್ನು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮದುವೆಯಾಗಿ ಆರೇ ಆರು ತಿಂಗಳಿಗೆ ರಾಖಿ, ಪತಿಯ ಮೇಲೆ ವಿವಾಹೇತರ ಸಂಬಂಧ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ.
Advertisement
ಮೂರು ದಿನಗಳ ಹಿಂದೆಯಷ್ಟೇ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ರಾಖಿ ಸಾವಂತ್. ಅದೇ ಸಂಜೆ ರೆಸ್ಟೋರೆಂಟ್ ನಲ್ಲಿ ಆದಿಲ್ ಖಾನ್ ಜೊತೆ ಊಟ ಮಾಡುತ್ತಿದ್ದ ವಿಡಿಯೋವನ್ನೂ ಹಂಚಿಕೊಂಡಿದ್ದರು. ಆದಿಲ್ ನನ್ನ ಬಳಿ ಕ್ಷಮೆ ಕೇಳಲು ಬಂದಿದ್ದ, ನಾನು ಕ್ಷಮಿಸಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಆನಂತರ ತನ್ನನ್ನು ಭೇಟಿ ಮಾಡಲು ಮನೆಗೆ ಬಂದಿದ್ದ ಆದಿಲ್ ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದರು. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಸಾಂಗ್ ಹಾಡಲಿದ್ದಾರೆ ಎಂ.ಎಂ ಕ್ಷೀರವಾಣಿ
Advertisement
Advertisement
ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ಹುಡುಗ ಆದಿಲ್ ಜೊತೆ ಮದುವೆ ಆಗಿರುವುದಾಗಿ ರಾಖಿ ಹೇಳಿಕೊಂಡಿದ್ದರು. ತಮ್ಮ ಮದುವೆಯಾಗಿ ಆರೇಳು ತಿಂಗಳು ಕಳೆದರೂ, ಆದಿಲ್ ಗಾಗಿ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದಾಗಿಯೂ ಅವರು ತಿಳಿಸಿದ್ದರು. ರಾಖಿ ಸಾವಂತ್ ಮದುವೆ ವಿಚಾರವಾಗಿ ಹಾದಿರಂಪ ಬೀದಿ ರಂಪ ಮಾಡುತ್ತಿದ್ದಂತೆಯೇ ಆದಿಲ್ ಕೂಡ ಮದುವೆ ವಿಷಯವನ್ನು ಒಪ್ಪಿಕೊಂಡಿದ್ದ. ಕೆಲ ಕಾರಣಗಳಿಂದಾಗಿ ಅದನ್ನು ಬಹಿರಂಗ ಪಡಿಸಲು ಸಾಧ್ಯವಾಗಲಿಲ್ಲ ಎಂದೂ ಅವನು ತಿಳಿಸಿದ್ದ. ಇನ್ನೇನು ಮದುವೆ ವಿಚಾರ ಸುಖಾಂತ್ಯ ಕಾಣಲಿದೆ ಎನ್ನುವ ಹೊತ್ತಿನಲ್ಲಿ, ಆದಿಲ್ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ ಎನ್ನುವ ವಿಚಾರವನ್ನು ರಾಖಿ ಕಣ್ಣಿರಿಡುತ್ತಾ ಹೇಳಿದ್ದರು. ಇಬ್ಬರ ಮಧ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಹೇಳಿಕೊಂಡಿದ್ದರು.
Advertisement
ರಾಖಿ ತಮ್ಮ ಮರ್ಯಾದೆಯನ್ನು ತಗೆಯುತ್ತಿದ್ದಾರೆ ಎಂದು ಆದಿಲ್ ಆರೋಪಿಸಿದ್ದರು. ಹಾಗಾಗಿ ಪತ್ನಿಯಿಂದ ಅಂತರ ಕಾಪಾಡಿಕೊಂಡಿದ್ದೇನೆ ಎಂದೂ ಅವರು ತಿಳಿಸಿದ್ದರು. ಆದಿಲ್ ಉಲ್ಟಾ ಹೊಡೆಯುತ್ತಿದ್ದಂತೆಯೇ ರಾಖಿ ಮತ್ತೆ ಪತಿಯ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದಾರೆ. ಆದಿಲ್ ಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದೆ. ಆ ಹುಡುಗಿಗಾಗಿಯೇ ತಮ್ಮ ಮದುವೆಯನ್ನು ಮುಚ್ಚಿಟ್ಟಿದ್ದ ಎಂದು ಆರೋಪಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k