ಟಾಲಿವುಡ್‌ನ (Tollywood) ಸ್ಟಾರ್ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ (Mm.keeravani) ಅವರ ʻನಾಟು ನಾಟುʼ (Naatu Naatu Song) ಸಾಂಗ್ ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದ ಮೇಲೆ ಇದೀಗ ಆಸ್ಕರ್ ಪ್ರಶಸ್ತಿಗೂ (Oscar Awards) ನಾಮಿನೇಟ್ ಆಗಿದೆ. ಅಷ್ಟೇ ಅಲ್ಲದೇ ಕೀರವಾಣಿ ಅವರಿಗೆ ಬಂಪರ್ ಅವಕಾಶವೊಂದು ಸಿಕ್ಕಿದೆ. ಆಸ್ಕರ್ ಪ್ರದಾನ ಸಮಾರಂಭದಲ್ಲಿ ಹಾಡಲು ಅವರಿಗೆ ಅವಕಾಶ ಸಿಕ್ಕಿದೆ.
Advertisement
ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಸಾಂಗ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ವರ್ಷ ರಿಲೀಸ್ ಆಗಿ, ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಆಗಿತ್ತು. ಇತ್ತೀಚಿಗಷ್ಟೇ ಗೋಲ್ಡನ್ ಗ್ಲೋಬ್ ಅವಾರ್ಡ್ ಬಾಚಿಕೊಂಡ ನಾಟು ನಾಟು ಸಾಂಗ್‌ನ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಈಗ ಮತ್ತೆ ಅವರ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿ ಪೈಪೋಟಿ ನೀಡುತ್ತಿದೆ.
Advertisement
Advertisement
`ನಾಟು ನಾಟು’ ಸೂಪರ್ ಸಾಂಗ್ ಅನ್ನು ಇದೀಗ ಆಸ್ಕರ್ ಸಮಾರಂಭದ ವೇದಿಕೆಯಲ್ಲಿ ಸಂಗೀತ ನಿರ್ದೇಶಕ ಕೀರವಾಣಿ ಅವರು ಹಾಡಲಿದ್ದಾರೆ. ಮಾ.12ರಂದು ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಅವಾರ್ಡ್ ಸಮಾರಂಭ ನಡೆಯಲಿದೆ. ಈ ಬಗ್ಗೆ ಅವರು ಕೊಂಚ ನರ್ವಸ್ ಆಗಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಚಿಂತೆ ಕಾಡ್ತಿರುವ ಬಗ್ಗೆ ಹೇಳಿರೋದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
SPEECHLESS????????
Music truly knows no boundaries.
Congratulations & thank you PEDDANNA for giving me #NaatuNaatu. This one is special.:)
I thank each & every fan across the globe for shaking their leg & making it popular ever since the release????#GoldenGlobespic.twitter.com/cMnnzYEjrV
— rajamouli ss (@ssrajamouli) January 11, 2023
ನಾವು ಆಸ್ಕರ್ ಗೆಲ್ಲುತ್ತೇವೆ ಎಂಬ ಬಗ್ಗೆ ನನಗೆ ಆತ್ಮವಿಶ್ವಾಸ ಇದೆ. ಆದರೆ ಅಷ್ಟು ಜನರ ಎದುರಿನಲ್ಲಿ ಪರ್ಫಾರ್ಮೆನ್ಸ್ ನೀಡಲು ಸಾಕಷ್ಟು ತಯಾರಿ ಬೇಕು ಎಂದು ಕೀರವಾಣಿ ಹೇಳಿದ್ದಾರೆ. ಅವರ ದೇಹದ ತೂಕ ಹೆಚ್ಚಿದೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ತುಂಬಾ ಸಮಯದಿಂದ ನಾನು ಆರೋಗ್ಯವನ್ನು ನಿರ್ಲಕ್ಷಿಸಿದೆ. ʻಗೋಲ್ಡನ್ ಗ್ಲೋಬ್ʼ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತುಕೊಂಡು ಮಾತನಾಡುವುದು ಕೂಡ ನನಗೆ ಸಮಸ್ಯೆ ಆಯಿತು ಎಂದು ಕೀರವಾಣಿ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k