ಮೈಸೂರಿನ ಹುಡುಗನನ್ನು ಬಾಯ್ ಫ್ರೆಂಡ್ ಮಾಡಿಕೊಂಡ ನಂತರ ರಾಖಿ ಸಾವಂತ್ ಖುಷಿಯಾಗಿದ್ದರು. ದುಬೈ, ಶಾಪಿಂಗ್, ಸಿನಿಮಾ ಅಂತೆಲ್ಲ ಸುತ್ತಾಟ ನಡೆಸಿದ್ದರು. ಸಂಭ್ರಮದಿಂದ ದಿನಗಳನ್ನು ದೂಡುತ್ತಿದ್ದ ರಾಖಿ ನಿನ್ನೆ ಏಕಾಏಕಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪೊಲೀಸ್ ಠಾಣೆಯಿಂದ ವಾಪಸ್ಸು ಬಂದಾಗ ಸ್ಟೇಶನ್ ಮುಂದೆಯೇ ಗಳಗಳನೇ ಅತ್ತಿದ್ದಾರೆ. ಹೊಸ ಬಾಯ್ ಫ್ರೆಂಡ್ ಆದಿಲ್ ಅದೆಷ್ಟೇ ಸಮಾಧಾನ ಮಾಡಿದರೂ, ರಾಖಿ ಅಳುವು ಮಾತ್ರ ನಿಂತಿಲ್ಲ.
Advertisement
ನಿನ್ನೆ ರಾಖಿ ಸಾವಂತ್, ತನ್ನ ಹೊಸ ಬಾಯ್ ಫ್ರೆಂಡ್ ಆದಿಲ್ ಜೊತೆ ಮುಂಬೈನ ಓಶಿವಾರಾ ಪೊಲೀಸ್ ಠಾಣೆಗೆ ಆಗಮಿಸಿದ್ದರು. ತನ್ನ ಮಾಜಿ ಪತಿ ರಿತೇಶ್ ತುಂಬಾ ಹಿಂಸೆ ನೀಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ರಿತೇಶ್ ಹ್ಯಾಕ್ ಮಾಡಿ ಮಿಸ್ ಯ್ಯೂಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ದೂರಿದ್ದಾರೆ. ಅಲ್ಲದೇ, ಆದಿಲ್ ಮತ್ತು ತಮ್ಮ ನಡುವಿನ ಸಂಬಂಧವನ್ನು ರಿತೀಶ್ ಹಾಳು ಮಾಡುತ್ತಿದ್ದಾನೆ ಎಂದಿದ್ದಾರೆ ರಾಖಿ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ – ಬಾಲಿವುಡ್ ನಟನ ಪುತ್ರ ಸೇರಿ 50ಕ್ಕೂ ಹೆಚ್ಚು ಮಂದಿ ವಶ
Advertisement
Advertisement
ದೂರುಕೊಟ್ಟು ಠಾಣೆಯಿಂದ ಹೊರಗೆ ಬರುತ್ತಿರುವಾಗ ರಾಖಿ ಮತ್ತು ಆದಿಲ್ ಅನ್ನು ಕ್ಯಾಮೆರಾಗಳು ಸುತ್ತುವರೆಯುತ್ತವೆ. ಆಗ ದುಃಖವನ್ನು ತಡೆದುಕೊಳ್ಳಲಾಗಿದೆ. ಬಿಟ್ಟೂಬಿಡದೇ ಅಳುತ್ತಾರೆ ರಾಖಿ. ಪಕ್ಕದಲ್ಲಿಯೇ ಇದ್ದ ಆದಿಲ್ ಸಮಾಧಾನ ಮಾಡಲು ಯತ್ನಿಸಿ ಸೋಲುತ್ತಾರೆ. ಆದಿಲ್ ಅದೆಷ್ಟೇ ಸಮಾಧಾನ ಮಾಡಿದರೂ, ರಾಖಿ ಮಾತ್ರ ಅಳುವುದನ್ನು ನಿಲ್ಲಿಸುವುದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.