ಲಕ್ನೋ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಈ ಬಾರಿ ಮಥುರಾ ಲೋಕಸಭಾ ಚುನಾವಣೆಯಲ್ಲಿ (Loka Sabha Election) ಸ್ಪರ್ಧಿ ಸಲಿದ್ದಾರೆ ಎಂಬ ಊಹಾಪೋಹಗಳ ಕುರಿತಂತೆ ಹಾಲಿ ಬಿಜೆಪಿ ಸಂಸದೆ ಹೇಮಾಮಾಲಿನಿ (Hema Malini) ಕಂಗನಾ ಅಲ್ಲ ರಾಖಿ ಸಾವಂತ್ (Rakhi Sawant) ಬೇಕಾದರೂ ಸ್ಪರ್ಧಿಸಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Advertisement
ಹೇಮಾಮಾಲಿನಿ ಅವರು ಪ್ರತಿನಿಧಿಸುವ ಕ್ಷೇತ್ರದಿಂದ ಈ ಬಾರಿ ನಟಿ ಕಂಗನಾ ರಣಾವತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂವ ವದಂತಿಗಳ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೇಮಾಮಾಲಿನಿ ಅವರು, ಇದು ದೇವರಿಗೆ ಬಿಟ್ಟಿದ್ದು, ಶ್ರೀಕೃಷ್ಣ ತಾನು ಅಂದುಕೊಂಡಿದ್ದನ್ನು ಮಾಡುತ್ತಾನೆ. ಮಥುರಾದಲ್ಲಿ ಸ್ಪರ್ಧಿಸಲು ಬೇರೆ ರಾಜಕಾರಣಿಗಳು (Politicians) ನಿಮಗೆ ಸಿಗುವುದಿಲ್ಲವೇ? ಸಿನಿಮಾ ತಾರೆಯರಯ ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ವಿಚಾರವನ್ನು ನೀವು ಎಲ್ಲರ ತಲೆಯಲ್ಲಿ ತುಂಬಿಸುತ್ತಿದ್ದೀರಾ. ಮಥುರಾ (Mathura) ಸಿನಿ ತಾರೆಯರು ಮಾತ್ರ ಸ್ಪರ್ಧಿಸಬೇಕು ಎಂಬಂತೆ ಬಿಂಬಿಸುತ್ತಿದ್ದೀರಾ. ನಿಮಗೆ ಮಥುರಾದಲ್ಲಿ ಸ್ಪರ್ಧಿಸಲು ಸಿನಿ ತಾರೆಯರೇ ಬೇಕಾ? ನಾಳೆ ರಾಖಿ ಸಾವಂತ್ ಕೂಡ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ಸಿಡಿಮಿಡಿಗೊಂಡಿದ್ದಾರೆ. ಇದನ್ನೂ ಓದಿ: ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ
Advertisement
#WATCH | Mathura, Uttar Pradesh: When asked about speculation that actor Kangana Ranaut could contest elections from Mathura, BJP MP Hema Malini says, “Good, it is good…You want only film stars in Mathura. Tomorrow, even Rakhi Sawant will become.” pic.twitter.com/wgQsDzbn5Z
— ANI (@ANI) September 24, 2022
Advertisement
ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರೊಬ್ಬರು ಓಹೋ ಈ ಮಹಿಳೆ ಸ್ವತಃ ಸಿನಿ ತಾರೆ. ಇವರ ಪತಿ ಮತ್ತು ಮಗ ಕೂಡ ರಾಜಕೀಯಕ್ಕೆ ಸೇರಿದ್ದಾರೆ. ಆದರೆ ಈ ಮಹಿಳೆಗೆ ಸಿನಿ ತಾರೆಯರು ರಾಜಕೀಯಕ್ಕೆ ಬಂದರೆ ಸಮಸ್ಯೆ ಇದೆಯೇ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108
Advertisement
ಇತ್ತೀಚೆಗಷ್ಟೇ ಕಂಗನಾ ರಣಾವತ್ ಕುಟುಂಬಸ್ಥರೊಂದಿಗೆ ಪ್ರಸಿದ್ಧ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಬಂಕೆ ಬಿಹಾರಿ ದೇವಸ್ಥಾನದಿಂದ ಹೊರ ಹೋಗುವ ವಿಐಪಿ ಮಾರ್ಗದಲ್ಲಿ ಕಂಗನಾ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಭಕ್ತರ ಗುಂಪು ಮತ್ತು ಸ್ಥಳೀಯರು ಆಕೆಯ ಕಡೆಗೆ ಓಡುತ್ತಿರುವುದು ಕಂಡುಬಂದಿತ್ತು. ದೇವಾಲಯದಿಂದ ಕಂಗನಾ ಹೊರಬರಲು ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಿಂದ ಕಂಗನಾ ರಣಾವತ್ ಬಿಜೆಪಿಯಿಂದ ಸ್ಪರ್ದಿಸುತ್ತಾರೆ ಎನ್ನುವ ಊಹಾಪೋಹ ಎದ್ದಿದೆ.