ಮತ್ತಿನ ಪಾತ್ರಗಳ ಮೂಲಕವೇ ಫೇಮಸ್ ಆಗಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಬೇಸರಿಸಿಕೊಂಡಿದ್ದಾರೆ. ಈವರೆಗೂ ತಾವು ಮಾಡಿರುವ ಪಾತ್ರಗಳು ಅಂಥದ್ದೇ ಆಗಿದ್ದರ ಬಗ್ಗೆಯೂ ಅವರಿಗೆ ಬೇಸರವಿದೆಯಂತೆ. ತಮ್ಮೊಳಗೆ ಅದ್ಭುತ ಕಲಾವಿದೆ ಇದ್ದರೂ, ಎಕ್ಸ್ ಪೋಸ್ ಮಾಡುವಂತಹ ಮತ್ತು ಮಾದಕವಾಗಿ ಕಾಣುವಂತಹ ಪಾತ್ರಗಳನ್ನೇ ನಿರ್ದೇಶಕರು ನೀಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
Advertisement
ಬೇರೆ ಬೇರೆ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ನನಗೂ ಇದೆ. ಒಳ್ಳೆಯ ಪಾತ್ರಗಳನ್ನು ಕೊಡಿ, ಅದ್ಭುತವಾಗಿಯೇ ಅವುಗಳನ್ನು ನಿಭಾಯಿಸುತ್ತೇನೆ ಎಂದು ಅನೇಕ ನಿರ್ದೇಶಕರಿಗೆ ಹೇಳಿದ್ದೇನೆ. ಆದರೆ, ಅವರು ನನ್ನ ಮಾತುಗಳನ್ನು ಕೇಳುವುದೇ ಇಲ್ಲ. ಕೇವಲ ಕಿಸ್ಸಿಂಗ್ ದೃಶ್ಯಗಳು ಇದ್ದರೆ ಮಾತ್ರ ಕರೆಯುತ್ತಾರೆ. ಅವರು ನನ್ನನ್ನು ಅಷ್ಟಕ್ಕೇ ಸೀಮಿತ ಮಾಡಿಕೊಂಡಿದ್ದಾರೆ. ನಾನು ಅದರಾಚೆಗೂ ಕಠಿಣ ಪಾತ್ರಗಳನ್ನು ನಿಭಾಯಿಸಬಲ್ಲೆ ಎಂದಿದ್ದಾರೆ ರಾಖಿ ಸಾವಂತ್. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ
Advertisement
Advertisement
ಮೈಸೂರು ಹುಡುಗ ಆದಿಲ್ ನನ್ನು ಪ್ರೀತಿಸಲು ಶುರು ಮಾಡಿದಾಗಿಂದ ರಾಖಿ ತುಂಬಾ ಬದಲಾಗಿದ್ದಾರಂತೆ. ತುಂಡು ಉಡುಗೆಗಳನ್ನು ತೊಡುತ್ತಿಲ್ಲವಂತೆ. ಚುಂಬಿಸುವಂತಹ, ಬೆಡ್ ರೂಮ್ ದೃಶ್ಯಗಳು ಇರುವಂತಹ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲವಂತೆ. ಆದಿಲ್ ಕುಟುಂಬಕ್ಕೆ ಅದೆಲ್ಲ ಇಷ್ಟವಾಗದೇ ಇರುವ ಕಾರಣಕ್ಕಾಗಿ ಇಂತಹ ನಿರ್ಧಾರ ತಗೆದುಕೊಂಡಿದ್ದಾರಂತೆ.