ಕೋವಿಡ್ ಅಪಾಯದಿಂದ ಪಾರಾಗಲು ಬೂಸ್ಟರ್ ಡೋಸ್ ತಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸತತ ಮನವಿ ಮಾಡಿಕೊಳ್ಳುತ್ತಿವೆ. ಆದರೆ, ಬೂಸ್ಟರ್ ಡೋಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ, ಸಖತ್ ಟ್ರೋಲ್ ಆಗಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್. ಬೂಸ್ಟರ್ ಡೋಸ್ ಅನ್ನು ಅವರು ವಯಾಗ್ರಕ್ಕೆ ಹೋಲಿಸಿದ್ದಾರೆ. ಸದ್ಯ ಬೂಸ್ಟರ್ ಡೋಸ್ ತಗೆದುಕೊಂಡಿರುವ ಅವರು ,ಎರಡು ದಿನದಿಂದ ವಯಾಗ್ರ ತಿಂದಂತೆ ನೋವಾಗುತ್ತಿದೆ ಎಂದಿದ್ದಾರೆ.
Advertisement
ಬಾಯ್ ಫ್ರೆಂಡ್ ಊರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಾಖಿ ಸಾವಂತ್ ಅವರನ್ನು ಪಾಪರಾಜಿಗಳ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ನನ್ನ ಜೀವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಳು ಮಾಡಿಬಿಟ್ಟರು. ಬೂಸ್ಟರ್ ಡೋಸ್ ತಗೆದುಕೊಂಡು ಎದೆಬಡಿತ ಜಾಸ್ತಿ ಅನಿಸುತ್ತಿದೆ. ಎದೆಯೊಳಗೆ ಏನೋನೋ ಆಗುತ್ತಿದೆ. ವಯಾಗ್ರ ತಿಂದಂತಹ ನೋವದು. ಬೂಸ್ಟರ್ ಡೋಸ್ ತಗೆದುಕೊಂಡು ಎರಡು ದಿನದಿಂದ ಒದ್ದಾಡ್ತಾ ಇದ್ದೇನೆ ಎಂದು ಹೇಳಿದರು. ಇದನ್ನೂ ಓದಿ:ಲಲಿತ್ ಮೋದಿ ಡೇಟಿಂಗ್ ವಿಚಾರ: ಟ್ರೋಲಿಗರಿಗೆ ಸುಶ್ಮಿತಾ ಸೇನ್ ತಿರುಗೇಟು
Advertisement
Advertisement
ಸದ್ಯ ಬಾಯ್ ಫ್ರೆಂಡ್ ಆದಿಲ್ ಮೈಸೂರಿನಲ್ಲಿದ್ದು, ಅವರನ್ನು ನೋಡಲು ಮೈಸೂರಿಗೆ ತೆರಳುತ್ತಿರುವುದಾಗಿ ರಾಖಿ ಸಾವಂತ್ ಹೇಳಿದರು. ಈ ಕಡೆ ಬಾಯ್ ಫ್ರೆಂಡ್ ಇಲ್ಲ, ಆ ಕಡೆ ಬೂಸ್ಟರ್ ಡೋಸ್ ತಗೆದುಕೊಂಡಿರುವ ನೋವು. ನನ್ನ ಸ್ಥಿತಿ ಯಾರಿಗೂ ಬರಬಾರದು ಅಂದಿರುವ ರಾಖಿ, ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದರು.