ಮುಂಬೈ: ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಪ್ರೇಮಿಗಳ ದಿನ ತಾನು ಪತಿಯಿಂದ ಬೇರೆಯಾಗುತ್ತಿರುವ ಕುರಿತಾಗಿ ಸೋಶಿಯಲ್ ಮೀಡಿಯಾ ಮೂಲಕವಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ಪತಿಯ ಕುರಿತಾಗಿ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿರುವ ರಾಖಿ ಸಾವಂತ್ ಪಾಪರಾಜಿ ಫೋಟೋಗ್ರಾಫರ್ ಎದುರು ಕಣ್ಣೀರಿಟ್ಟಿದ್ದಾರೆ. ನನ್ನ ಪತಿ ರಿತೇಶ್ನಿಂದ ಬೇರ್ಪಟ್ಟಿದ್ದರೂ, ನಾನು ಅವನನ್ನು ಇನ್ನೂ ಪ್ರೀತಿಸುತ್ತಿದ್ದೇನೆ. ಕ್ಷಮಿಸಿ, ಇದು ನನ್ನ ತಪ್ಪು ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಾಮೆಂಟ್ ಮೂಲಕವಾಗಿ ರಾಖಿಗೆ ಸಮಾಧಾನ ಮಾಡಿದ್ದಾರೆ.
Advertisement
Advertisement
ಹಿಂದಿ ಬಿಗ್ ಬಾಸ್ 15ನೇ ಸೀಸನ್ನಲ್ಲಿ ಇವರಿಬ್ಬರ ಮದುವೆ ವಿಚಾರ ಬಯಲಾಗಿತ್ತು. ಆದರೆ ಈಗ ರಾಖಿ ಸಾವಂತ್ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಸ್ಥಿತಿ ಕಂಡು ಅಭಿಮಾನಿಗಳು ಅಯ್ಯೋ ಪಾಪ ಎನ್ನುತ್ತಿದ್ದಾರೆ. ಇದನ್ನೂ ಓದಿ: ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್
Advertisement
Advertisement
ವ್ಯಾಲೆಂಟೈನ್ಸ್ ಡೇ ದಿನಕ್ಕೂ ಮುನ್ನವೇ ಈ ರೀತಿ ಆಗಿದ್ದರ ಬಗ್ಗೆ ನನಗೆ ತೀವ್ರ ಬೇಸರವಿದೆ. ಆದರೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಿತ್ತು. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ನಾವು ದೂರವಾಗುವುದೇ ಉತ್ತಮ ಎನಿಸಿತು. ನನ್ನ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ನಾನು ಗಮನ ಹರಿಸಬೇಕು. ರಿತೇಶ್ಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದು ರಾಖಿ ಸಾವಂತ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಪತಿಯಿಂದ ದೂರವಾಗುತ್ತಿರುವ ವಿಚಾರವನ್ನು ಹೆಳಿಕೊಂಡಿದ್ದರು.
View this post on Instagram
ಹಿಂದಿ ಬಿಗ್ ಬಾಸ್ 14ನೇ ಸೀಸನ್ನಲ್ಲಿ ರಾಖಿ ಸಾವಂತ್ ಸ್ಪರ್ಧಿಸಿದ್ದರು. ಆಗ ಮೊದಲ ಬಾರಿಗೆ ಗಂಡನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಜಗತ್ತಿನ ಮುಂದೆ ಬರುವಂತೆ ರಿತೇಶ್ ಬಳಿ ಮನವಿ ಮಾಡಿಕೊಂಡರೂ ಕೂಡ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅಂತಿಮವಾಗಿ ಬಿಗ್ ಬಾಸ್ 15ನೇ ಸೀಸನ್ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ನಟಿ ತಾನು ಪತಿಯಿಂದ ದೂರವಾಗುತ್ತಿರುವ ಕುರಿತಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.