ಫಸ್ಟ್ ನೈಟ್ ಲೈವ್ ಮಾಡುತ್ತೇನೆ ಎಂದಿದ್ದ ರಾಖಿ ಸಾವಂತ್ ಮದುವೆ ಮುರಿದು ಬಿತ್ತು!

Public TV
2 Min Read
RAKHI SAWANTH DIPAK KALAL

ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಹೆಸರು ಪಡೆದಿರುವ ರಾಖಿ ಸಾವಂತ್ ಮದುವೆ ಮುರಿದು ಬಿದ್ದಿದ್ದು, ಮದುವೆಯಾಗುತ್ತೇನೆ ಎಂದು ಹೇಳಿ ಭಾವಿ ಪತಿ ದೀಪಕ್ ಲಾಲ್ ನಿಂದ ಪಡೆದಿದ್ದ ಒಂದು ಕೋಟಿ ರೂ. ಹಣವನ್ನು ಹಿಂದಿರುಗಿಸುವುದಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಮದುವೆ ಮುರಿದು ಬಿದ್ದ ಕುರಿತು ರಾಖಿ ಸಾವಂತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ದೀಪಕ್ ಲಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಳೆದ ಕೆಲ ದಿನಗಳಿಂದ ನಾನು ಊಟ ಮಾಡುವುದನ್ನೇ ಬಿಟ್ಟಿದ್ದು, ಗೊಳೋ ಎಂದು ಅತ್ತು ಅತ್ತು ನನ್ನ ಕಣ್ಣಿನ ಕಾಜಲ್ ಕೂಡ ಅಳಿಸಿ ಹೋಗಿದೆ. ಮದುವೆ ಮಾಡಿಕೊಂಡು ಫಸ್ಟ್ ನೈಟ್ ಲೈವ್ ಮಾಡುತ್ತೇನೆ ಎಂದು ಹೇಳಿದ್ದ ನೀನು ನನಗೆ ದೀಪಿಕಾ ಹಾಗೂ ಪ್ರಿಯಾಂಕ ಚೋಪ್ರಾರಂತೆ ಮದುವೆಯಾಗುವುದನ್ನು ತಪ್ಪಿಸಿದ್ದಿಯಾ. ನನ್ನನ್ನು ಮದುವೆ ಆಗುವುದಾಗಿ ಹೇಳಿ ಬೇರೆಯವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಯಾ ಎಂದು ಆರೋಪಗಳ ಸುರಿಮಳೆ ಮಾಡಿದ್ದಾರೆ.

rakhi sawant collage

ಮದುವೆ ಸಮಾರಂಭಕ್ಕಾಗಿ ನೀನು ನನಗೆ ನೀಡಿದ್ದ 1 ಕೋಟಿ ರೂ.ನಲ್ಲಿ ಶಾಪಿಂಗ್ ಮಾಡಿ 20 ಲಕ್ಷ ಮಾತ್ರ ಉಳಿದುಕೊಂಡಿದೆ. ಮದುವೆ ರಿಂಗ್ ಸೇರದಿಂತೆ ಹಣವನ್ನು ವಾಪಸ್ ನೀಡಲ್ಲ. ನೀನು ನನಗೆ ಕೊಟ್ಟಿರುವ ವಧುದಕ್ಷಿಣೆ ಹಣ ಅದ್ದರಿಂದ ನಿನ್ನಿಂದ ಏನಾಗುತ್ತೊ ಮಾಡಿಕೋ. ನಿನ್ನ ನಡೆಯಿಂದ ಮದುವೆ ಮುರಿದು ಬಿದ್ದಿದೆ. ಈಗ ನನ್ನ 10 ಜನ ಬಾಯ್ ಫ್ರೆಂಡ್ಸ್ ಹಾಗೂ ಅಪಾರ ಅಭಿಮಾನಿಗಳಿಗೆ ಉತ್ತರಿಸಬೇಕಿದೆ ಎಂದು ತಿಳಿಸಿದ್ದಾರೆ.

https://www.instagram.com/p/BrDPWh5B8BB/

ಅಷ್ಟೇ ಅಲ್ಲದೇ ನಾನು ಕಳೆದ 15 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಗೌರವ ಪಡೆದಿದ್ದು, ನನ್ನ ಕುಟುಂಬವನ್ನು ನಾನೇ ನಿರ್ವಹಿಸುತ್ತಿದ್ದೇನೆ. ನಿನ್ನಿಂದ ನನ್ನ ಗೌರವಕ್ಕೆ ದಕ್ಕೆ ಉಂಟಾಗಿದೆ. ನಾನು ಬಹಳ ಸರಳ ಹುಡುಗಿಯಾಗಿದ್ದು, ಸುಳ್ಳು ಹೇಳಲು ಭಯಸುವುದಿಲ್ಲ. ನನ್ನನ್ನು ಕ್ಷಮಿಸು ಎಂದು ಕೇಳಿದ್ದಾರೆ.

ಈ ಹಿಂದೆ ರಾಖಿ ಸಾವಂತ್ ತಿಳಿಸಿದಂತೆ ಡಿಸೆಂಬರ್ 31 ರಂದು ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. ಸದಾ ಒಂದಿಲ್ಲೊಂದು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕವೇ ರಾಖಿ ಸಾವಂತ್ ಡ್ರಾಮಾ ಕ್ವೀನ್ ಎಂದು ಹೆಸರು ಪಡೆದಿದ್ದು, ಈ ಹಿಂದೆಯೂ ಕೂಡ ತಾನು ಮದುವೆಯಾಗುತ್ತಿರುವುದಾಗಿ ಹೇಳಿ ಅಂತಿಮ ಕ್ಷಣದಲ್ಲಿ ಕೈ ಕೊಟ್ಟಿದ್ದಳು.

https://www.instagram.com/p/BrDPoMMB0vU/

https://www.instagram.com/p/BrDQMPchd0l/

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *