ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಕಚ್ಚಾಟದ ಮೇಲೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯಿಡಲು ತೀರ್ಮಾನ ಮಾಡಿದೆ. ಮೊದಲು ನಿರ್ಮಲಾ ಸೀತಾರಾಮನ್‍ಗೆ ವೋಟಿಂಗ್ ಮಾಡಿಸಲು ತೀರ್ಮಾನ ಮಾಡಿದ್ದು, ನಿರ್ಮಲಾಗೆ 46 ಮೊದಲ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ಬಿಜೆಪಿ ಪ್ಲಾನ್ ಮಾಡಿದೆ.
ನಂತರ ಜಗ್ಗೇಶ್‍ಗೆ 44 ಮೊದಲ ಪ್ರಾಶಸ್ತ್ಯದ ಮತ ಇದ್ದು, 32 ಎರಡನೇ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ನಿರ್ಧರಿಸಲಾಗಿದೆ. ಅಂತಿಮವಾಗಿ 3ನೇ ಅಭ್ಯರ್ಥಿ ಲೆಹರ್ ಸಿಂಗ್‍ಗೆ 32 ಮೊದಲ ಪ್ರಾಶಸ್ತ್ಯದ ಮತಗಳು, 90 ಎರಡನೇ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ಬಿಜೆಪಿ ಪಡೆ ನಿರ್ಧರಿಸಿದೆ.
Advertisement
Advertisement
ಈಗಾಗಲೇ ಮತಗಳ ವರ್ಗೀಕರಣ ಮಾಡಿರುವ ರಾಜ್ಯ ಬಿಜೆಪಿ, ಯಾರು ಯಾರಿಗೆ ವೋಟ್ ಮಾಡ್ಬೇಕು ಎಂಬುದನ್ನು ಗುಪ್ತವಾಗಿ ಇಟ್ಟಿದೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಶಾಸಕರು ಬಂದ ಬಳಿಕ ಯಾರಿಗೆ ಯಾರು ವೋಟ್ ಮಾಡಬೇಕು ಎಂದು ತಿಳಿಸಲಿದೆ. ಇದನ್ನೂ ಓದಿ: ಸಿದ್ದು-ಎಚ್‌ಡಿಕೆ ಪ್ರತಿಷ್ಠೆಯಲ್ಲಿ ಮೈತ್ರಿ ಅನುಮಾನ – ಜೆಡಿಎಸ್ ಮುಂದಿರುವ ಆಯ್ಕೆಗಳೇನು?
Advertisement
ಇಂದು ಶಾಸಕಾಂಗ ಪಕ್ಷದ ಕೊಠಡಿ ಒಳಗೆ ಬಂದಾಗ ಶಾಸಕರನ್ನು ಲಾಕ್ ಮಾಡಲಿದ್ದು, ಬಳಿಕ ತಲಾ 5 ಜನರಂತೆ ಮತದಾನ ಕೊಠಡಿಗೆ ಕಳುಹಿಸಲು ಬಿಜೆಪಿ ಮೆಗಾ ಪ್ಲ್ಯಾನ್ ಮಾಡಿದೆ.