ಲೋಕಸಮರ ಹೊತ್ತಲ್ಲಿ ದೋಸ್ತಿಗಳಿಗೆ ಮತ್ತೆ ಶಾಕ್- ಕಾಂಗ್ರೆಸ್ಸಿನ ಮೂವರು, ಬಿಜೆಪಿಯ ಒಬ್ಬರಿಗೆ ಗೆಲುವು

Public TV
2 Min Read
Rajya Sabha Election Election 2024 Karnataka BJP Congress JDS Game Plan

– ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟ
– ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಸೋಲು

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಸನಿಹದಲ್ಲಿ ಕರ್ನಾಟಕದಲ್ಲಿ (Karnataka) ದೋಸ್ತಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕಳೆದ ವಾರವಷ್ಟೇ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ದೋಸ್ತಿಗಳು ಸೋತಿದ್ದರು. ಈಗ ರಾಜ್ಯಸಭೆ ಚುನಾವಣೆಯಲ್ಲಿಯೂ (Rajya Sabha Election) ಬಿಜೆಪಿ-ಜೆಡಿಎಸ್ (BJP-JDS) ಎಡವಿ ಮುಖಭಂಗ ಅನುಭವಿಸಿದೆ.

ಸಂಖ್ಯಾಬಲ ಕೊರತೆ ನಡುವೆಯೂ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಎನ್‌ಡಿಎ (NDA) ಮ್ಯಾಜಿಕ್ ಮಾಡುವಲ್ಲಿ ಸೋತಿದೆ. ಪಕ್ಷೇತರರು ನಿರೀಕ್ಷೆಯಂತೆಯೇ ಕೈ ಹಿಡಿದ್ದಾರೆ. ಬಿಜೆಪಿಯ ಎಸ್‌ಟಿ ಸೋಮಶೇಖರ್ (ST Somashekhar) ಎಲ್ಲರ ನಿರೀಕ್ಷೆ ಮೀರಿ ಕಾಂಗ್ರೆಸ್‌ಗೆ ವೋಟ್ ಹಾಕಿದ್ದಾರೆ. ಅವರ ಸಾಥಿ ಶಿವರಾಮ್ ಹೆಬ್ಬಾರ್ (Shivaram Hebbar) ಮತದಾನದಿಂದಲೇ ದೂರ ಉಳಿದು ಬಿಜೆಪಿಗೆ ಡ್ಯಾಮೇಜ್ ಮಾಡಿದ್ದಾರೆ. ಪರಿಣಾಮ ಎನ್‌ಡಿಎಯ ಎರಡನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಸೋಲನುಭವಿಸಿದ್ದಾರೆ.

ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಕೇನ್, ಜಿಸಿ ಚಂದ್ರಶೇಖರ್, ನಾಸೀರ್ ಹುಸೇನ್ ಮತ್ತು ಬಿಜೆಪಿಯ ನಾರಾಯಣ ಸಾ ಬಾಂಡಗೆ ಅವರು ಗೆದ್ದು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ-ಜೆಡಿಎಸ್ ಪಡಸಾಲೆಯಲ್ಲಿ ನಿರಾಸೆ ಆವರಿಸಿದೆ. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ


ರಾಜ್ಯಸಭೆ ಫಲಿತಾಂಶ
* ಅಜಯ್ ಮಕೇನ್ – ಕಾಂಗ್ರೆಸ್ ಅಭ್ಯರ್ಥಿ – 47 ಮತ – ಗೆಲುವು
* ನಾಸೀರ ಹುಸೇನ್ – ಕಾಂಗ್ರೆಸ್ ಅಭ್ಯರ್ಥಿ – 47 ಮತ – ಗೆಲುವು
* ಜಿಸಿ ಚಂದ್ರಶೇಖರ್ – ಕಾಂಗ್ರೆಸ್ ಅಭ್ಯರ್ಥಿ – 45 ಮತ – ಗೆಲುವು
* ನಾರಾಯಣ ಸಾ ಬಾಂಡಗೆ –  ಬಿಜೆಪಿ ಅಭ್ಯರ್ಥಿ – 48 ಮತ – ಗೆಲುವು
* ಕುಪೇಂದ್ರ ರೆಡ್ಡಿ – ಎನ್‌ಡಿಎ ಅಭ್ಯರ್ಥಿ – 35 ಮತ –  ಸೋಲು ಇದನ್ನೂ ಓದಿ: ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮತ ಹಾಕಬಹುದಿತ್ತು: ಸೋಮಶೇಖರ್ ವಿರುದ್ಧ ಅಶೋಕ್ ಕಿಡಿ

ರಾಜ್ಯಸಭೆ ಎಲೆಕ್ಷನ್ ಮತ ಲೆಕ್ಕ
* ಒಟ್ಟು ಮತ – 223
* ಚಲಾವಣೆ – 222
* ಗೈರು – 01
* ಕಾಂಗ್ರೆಸ್ – 139 (ಹೆಚ್ಚುವರಿ 5 ಮತ.. ನಾಲ್ವರು ಪಕ್ಷೇತರರು, ಎಸ್‌ಟಿ ಸೋಮಶೇಖರ್)
* ಬಿಜೆಪಿ – 64 (-2 ಮತ)
* ಜೆಡಿಎಸ್ – 19 (19 ಮತ)

Share This Article