ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

Public TV
1 Min Read
hd Kumaraswamy 1

ಬೆಂಗಳೂರು: ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವ ವಿಚಾರ ತಿಳಿದು ಬರುತ್ತಲೇ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ. ಕೋಲಾರ ಜನತೆಯ ಜೆಡಿಎಸ್ ಮತದಾರರಿಗೆ ಅವರು ಅವಮಾನ ಮಾಡಿದ್ದಾರೆ. ನಮ್ಮ ಪಕ್ಷದ ಚಿಹ್ನೆ ಅಡಿ ಗೆದ್ದು, ಅವರಿಗೆ ಮತ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

srinivas gowda 1

ಕಾಂಗ್ರೆಸ್‌ನವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. 2016ರಲ್ಲಿ 8 ಶಾಸಕರ ಕೈಯಲ್ಲಿ ಅಡ್ಡ ಮತ ಹಾಕಿಸಿಕೊಂಡಿದ್ದರು. ಇದೀಗ ಶ್ರೀನಿವಾಸ್ ಗೌಡ ಅವರ ಕೈಯಲ್ಲಿ ಅಡ್ಡ ಮತ ಹಾಕಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಗುಬ್ಬಿ ಶ್ರೀನಿವಾಸ್ ಬಗ್ಗೆ ಮಾತನಾಡಿದ ಹೆಚ್‌ಡಿಕೆ, ಗುಬ್ಬಿ ಶ್ರೀನಿವಾಸ್ ಯಾರಿಗೂ ಮತ ಹಾಕಿಲ್ಲ. ಖಾಲಿ ಪೇಪರ್ ಕೊಟ್ಟು ಹೋಗಿದ್ದಾರೆ. ಆದರೆ ಮಾಧ್ಯಮದ ಮುಂದೆ ಜೆಡಿಎಸ್‌ಗೆ ಮತ ಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ. ಯಾಕೆ ಇಷ್ಟು ನಾಟಕವಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

gubbi srinivas

ಇವರನ್ನು ಮಂತ್ರಿ ಮಾಡಿದ್ದೇ ತಪ್ಪಾಯಿತು. ಇವರ ಬಂಡವಾಳ ಸಂಜೆ ಗೊತ್ತಾಗಲಿದೆ. ಇವರಿಗೆ ಜನರೇ ತಕ್ಕ ಬುದ್ಧಿ ಕಲಿಸುತ್ತಾರೆ ಎಂದು ಹೇಳಿಕೆ ನೀಡಿದರು.

Share This Article