ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ಅಡ್ಡ ಮತದಾನದ (Cross Vote) ಬಗ್ಗೆ ಚರ್ಚೆ ನಡೆದಿದೆ.
ಬುಧವಾರ ರಾತ್ರಿ ಖಾಸಗಿ ಹೋಟೆಲಿನಲ್ಲಿ ಸಿಎಲ್‌ಪಿ ಸಭೆ ನಡೆಯಿತು. ಈ ವೇಳೆ ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಬಿಜೆಪಿಯಿಂದ (BJP) 2 ಜೆಡಿಎಸ್‌ನಿಂದ (JDS) 4 ಒಟ್ಟು 6 ಶಾಸಕರು ನಮ್ಮ ಪರವಾಗಿ ಅಡ್ಡ ಮತದಾನಕ್ಕೆ ಸಿದ್ದರಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕೆ 11 ಕೋಟಿ ದೇಣಿಗೆ ನೀಡಿದ್ದ ವಜ್ರ ಉದ್ಯಮಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್
Advertisement
Advertisement
ಬಿಜೆಪಿ-ಜೆಡಿಎಸ್‌ನವರು 5ನೇ ಅಭ್ಯರ್ಥಿಯನ್ನು ಹಾಕಿದರೆ ಮಾತ್ರ ಆ ಪ್ರಮೇಯ ಬರುತ್ತದೆ. ಕಾಂಗ್ರೆಸ್ ಶಾಸಕರ ಅಡ್ಡ ಮತದಾನದ ಬಗ್ಗೆ ನಮಗೆ ಯಾವುದೇ ಆತಂಕ ಇಲ್ಲ. ಯಾರು ಯಾರಿಗೆ ಮತ ಹಾಕಬೇಕು ಎಂಬುದನ್ನು ಫೆ. 25 ಅಥವಾ 26ರಂದು ಸಭೆ ಸೇರಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
Advertisement
ಒಂದು ವೇಳೆ ಬಿಜೆಪಿ 5ನೇ ಅಭ್ಯರ್ಥಿಯನ್ನು ಹಾಕಿದರೆ ಅಡ್ಡ ಮತದಾನದ ಭೀತಿ ಅಥವಾ ಶಾಸಕರನ್ನು ಒಂದು ಕಡೆ ಶಿಫ್ಟ್ ಮಾಡುವುದು ಇದೆಲ್ಲದರ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. ಸದ್ಯಕ್ಕೆ ಆ ಆತಂಕ ಕಾಂಗ್ರೆಸ್‌ಗೆ ಇಲ್ಲ ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸಚಿವರ ಸ್ಪರ್ಧೆ ಅನಿವಾರ್ಯ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?