ನವದೆಹಲಿ: ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತು ತೃಣಮೂಲ ಸಂಸದ ಡೋಲಾ ಸೇನ್ ಸೇರಿದಂತೆ 12 ರಾಜ್ಯಸಭೆಯ ಸದಸ್ಯರನ್ನು ಪ್ರಸಕ್ತ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ಮುಂಗಾರು ಅಧಿವೇಶನದ ಕೊನೆಯ ದಿನದಂದು ಮೇಲ್ಮನೆಯಲ್ಲಿ ಗದ್ದಲ ಸೃಷ್ಟಿಸಿ ಅಶಿಸ್ತು ತೋರಿದ್ದಕ್ಕೆ ಅವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗಿದೆ.
Advertisement
Advertisement
ಯಾರೆಲ್ಲ ಅಮಾನತು?
ಪ್ರಿಯಾಂಕಾ ಚತುರ್ವೇದಿ, ಡೋನಾ ಸೇನ್, ಎಳಮರಮ್ ಕರೀಂ (ಸಿಪಿಎಂ), ಕಾಂಗ್ರೆಸ್‌ನ ಫುಲೋ ದೇವಿ ನೇತಮ್, ಛಾಯಾ ವರ್ಮಾ, ಆರ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್, ಅಖಿಲೇಶ್ ಪ್ರಸಾದ್ ಸಿಂಗ್, ಸಿಪಿಐನ ಬಿನೋಯ್ ವಿಶ್ವಂ, ಟಿಎಂಸಿಯ ಶಾಂತಾ. ಛೆಟ್ರಿ ಮತ್ತು ಶಿವಸೇನೆಯ ಅನಿಲ್ ದೇಸಾಯಿ ಅಮಾನತುಗೊಂಡಿದ್ದಾರೆ.
Advertisement
Advertisement
ಅಮಾನತು ನೋಟಿಸ್‌ನಲ್ಲಿ ಏನಿದೆ?
ಮುಂಗಾರು ಅಧಿವೇಶನದ ಕೊನೆಯ ದಿನವಾದ ಆಗಸ್ಟ್ 11 ರಂದು ಸಂಸದರು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕವಾಗಿ ದುರ್ನಡತೆ, ಅವಹೇಳನಕಾರಿ, ಅಶಿಸ್ತಿನ ಮತ್ತು ಹಿಂಸಾತ್ಮಕ ನಡವಳಿಕೆ ತೋರಿದ್ದಾರೆ. ಈ ಮೂಲಕ ಸದನದ ಘನತೆಯನ್ನು ಕಡಿಮೆಗೊಳಿಸಿ ಅಪಖ್ಯಾತಿ ತಂದಿದ್ದಾರೆ. ಈ ಕಾರಣದಿಂದ ಈ ಸದಸ್ಯರನ್ನು 255ನೇ ಅಧಿವೇಶನದ ಉಳಿದ ಅವಧಿಗೆ ಸದನದ ಸೇವೆಯಿಂದ ರಾಜ್ಯಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ನಿಯಮ 256 ರ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಚರ್ಚೆಯಿಲ್ಲದೆ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ರದ್ದುಗೊಳಿಸಿರುವುದು ದುರಾದೃಷ್ಟಕರ ಸಂಗತಿ: ರಾಹುಲ್ ಗಾಂಧಿ
If you see the CCTV footage it has been recorded how male marshals were jostling female MPs. All of this on one side & your decision on the other? What kind of unparliamentary behaviour is this?: Shiv Sena MP Priyanka Chaturvedi – one of the 12 RS MPs suspended for this session pic.twitter.com/qwkCVvUsse
— ANI (@ANI) November 29, 2021
ನಡೆದಿದ್ದು ಏನು?
ಆಗಸ್ಟ್ 11 ರಂದು ಸಂಜೆ ಪೆಗಾಸಸ್ ವಿಚಾರ ಮತ್ತು ವಿಮಾ ಖಾಸಗೀಕರಣ ಮಸೂದೆ ಅಂಗೀಕಾರದ ಸಮಯದಲ್ಲಿ ಪ್ರತಿಪಕ್ಷಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಾವಿಗಿಳಿದು ಧರಣಿ, ಗದ್ದಲ ಎಬ್ಬಿಸಿದ್ದರು. ಈ ವೇಳೆ ವಿಪಕ್ಷಗಳ ಸದಸ್ಯರು ಹಾಗೂ ಮಾರ್ಷಲ್‌ಗಳ ನಡುವೆ ಘರ್ಷಣೆ ನಡೆದಿತ್ತು. ಇದನ್ನೂ ಓದಿ: ಮುಂದಿನ ತಿಂಗಳು ಗೋರಖ್‍ಪುರದಲ್ಲಿ AIIMS ಉದ್ಘಾಟನೆ: ಯೋಗಿ ಆದಿತ್ಯನಾಥ್
ಹೊರಗಿನವರನ್ನು ಕರೆಸಿ ಸ್ತ್ರೀಯರ ಮೇಲೆ ಹಲ್ಲೆ ಮಾಡಿದ್ದಾರೆ ವಿಪಕ್ಷ ಆರೋಪಿಸಿದ್ದವು. ಆದರೆ ಕೇಂದ್ರ ಸರ್ಕಾರ ಆರೋಪವನ್ನು ನಿರಾಕರಿಸಿ ವಿಪಕ್ಷದವರೇ ದಾಳಿ ನಡೆಸಿದ್ದಾರೆಂದು ಕಿಡಿ ಕಾರಿ ಕಲಾಪದ ವಿಡಿಯೋವನ್ನು ರಿಲೀಸ್ ಮಾಡಿತ್ತು.
Here is EXACTLY what happened in the RS on 11th August 2021 when India's democracy, India's values and India's culture was strangulated and sought to be murdered by the Congress.
Ostensible culprits: 1) P. Devi Netam – INC M.P. and 2) Chhaya, INC. 1/5pic.twitter.com/sAqXmjBAjT
— Akhilesh Mishra (@amishra77) August 12, 2021
ಈ ಸಿಸಿಟಿವಿ ವಿಡಿಯೋದಲ್ಲಿ ಮಹಿಳಾ ಸಂಸದರೇ ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆಸಿರುವುದು ದೃಢಪಟ್ಟಿತ್ತು. ಕೆಲ ಪುರುಷ ಸದಸ್ಯರು ಮೇಜಿನ ಮೇಲೆ ಹತ್ತಿ ಅಗೌರವ ತಂದಿರುವುದು ಸೆರೆಯಾಗಿತ್ತು.