ಕಾರವಾರ: ಇಂಡಿಯನ್ ನೇವಿಗಾಗಿ ತಯಾರಾಗುತ್ತಿರುವ 41 ಶಿಪ್ ಹಾಗೂ ಸಬ್ ಮರೀನ್‍ಗಳ ಪೈಕಿ 39 ಭಾರತದಲ್ಲೇ ತಯಾರಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
Advertisement
ಎರಡು ದಿನದ ಕರ್ನಾಟಕ ನೇವಲ್ ಬೇಸ್‍ನ ಕಾರವಾರದ ಕದಂಬಾ ನೌಕಾನೆಲೆಗೆ ಆಗಮಿಸಿ ಸ್ವದೇಶಿ ನಿರ್ಮಿತ ಖಂಡೇರಿ ಜಲಂತರಗಾಮಿ ಹಡಗಿನಲ್ಲಿ ಇಂದು ಕೇಂದ್ರ ಸಚಿವರು ಚರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಎನ್‍ಎಸ್ ಖಂಡೇರಿ ಭಾರತದ ಮೇಕ್ ಇಂಡಿಯಾ ಪ್ರಾಜೆಕ್ಟ್‍ನ ಅತ್ಯುತ್ತಮ ಉದಾಹರಣೆಯಾಗಿದೆ ಇಂದು ನಾನು ಪ್ರಯಾಣ ಬೆಳೆಸಿದ ಐಎನ್‍ಎಸ್ ಖಂಡೇರಿ ಸಬ್‍ಮರೀನ್‍ಗೆ 2019 ಸೆಪ್ಟೆಂಬರ್‍ನಲ್ಲಿ ನಾನೇ ಚಾಲನೆ ನೀಡಿದ್ದೆ. ಭಾರತದಲ್ಲಿ ಯುದ್ಧ ನೌಕೆಗಳು ತಯಾರಾಗೋ ಮೂಲಕ ಪ್ರಧಾನಿಯವರ ಆತ್ಮನಿರ್ಭರ್ ಅಭಿಯಾನಕ್ಕೆ ಹೆಚ್ಚು ಬಲ ಬಂದಿದೆ ಎಂದರು. ಇದನ್ನೂ ಓದಿ: ವಿಮಾನದಲ್ಲಿ ಗುಟ್ಕಾ ಕಲೆ – ಸೂಪರ್‌ಸ್ಟಾರ್‌ಗಳ ಕಾಲೆಳೆದ ನೆಟ್ಟಿಗರು
Advertisement
Advertisement
ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೇವಿಯ ಐಎನ್‍ಎಸ್ ವಿಕ್ರಾಂತ್ ಕಮಿಷನಿಂಗ್‍ಗೆ ತಯಾರಾಗಿದೆ. ವಿಕ್ರಾಂತ್ ಹಾಗೂ ವಿಕ್ರಮಾದಿತ್ಯ ಭಾರತದ ನೌಕಾಶಕ್ತಿಯನ್ನು ಹೆಚ್ಚು ಬಲಯುತಗೊಳಿಸಲಿದೆ. ಪ್ರಪಂಚದಲ್ಲಿ ಪ್ರಮುಖ ನೇವಿಗಳ ಸಾಲಿನಲ್ಲಿ ಇಂಡಿಯನ್ ನೇವಿ ಗುರುತಿಸಲ್ಪಡುತ್ತಿದೆ, ಪ್ರಪಂಚದ ದೊಡ್ಡ, ದೊಡ್ಡ ನೌಕಾಶಕ್ತಿಗಳು ಭಾರತದ ಜೊತೆ ಸಹಯೋಗ ಹೊಂದಲು ಇಚ್ಚುಕವಾಗಿದೆ. ಭಾರತದ ನೇವಿಯಲ್ಲಿ ನಡೆಯುತ್ತಿರುವ ತಯಾರಿಗಳು ಯಾರದ್ದೇ ವಿರುದ್ಧವಾಗಲ್ಲ, ಬದಲಾಗಿ ದೇಶದ ಕರಾವಳಿ ತೀರದ ಜನರ ಶಾಂತಿ, ನೆಮ್ಮದಿ, ಸಂಪದ್ಬರಿತ ಜೀವನಕ್ಕಾಗಿ ಈ ತಯಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು. ಇದನ್ನೂ ಓದಿ: ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ
Advertisement