ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಟವರ್ 2 ರಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ಟವರ್‍ನಲ್ಲಿದ್ದ ಎಲ್ಲಾ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಆರಂಭದಲ್ಲಿ ಬೆಂಕಿಯಿಂದ ತೀವ್ರ ಹೊಗೆ ಕಾಣಿಸಿಕೊಂಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ರೋಗಿಗಳನ್ನು ಸ್ಥಳದಿಂದ ಸ್ಥಳಾಂತರಿಸಲು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ
Advertisement
Tamil Nadu | Fire breaks out at Chennai’s Rajiv Gandhi Government Hospital. Several fire tenders reach the spot. Further details awaited pic.twitter.com/dgGhTQvj84
— ANI (@ANI) April 27, 2022
Advertisement
ತಮಿಳುನಾಡಿನ ಆರೋಗ್ಯ ಪ್ರಧಾನ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಪ್ರಕಾರ, ಹಳೆಯ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುಂದಿನ ಮೂರು ಬ್ಲಾಕ್‍ಗಳು ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಹೆಚ್ಚು ಗಮನಹರಿಸಬೇಕು: ರಾಹುಲ್ ಸಲಹೆ
Advertisement
Safely evacuated patients from Chennai’s Rajiv Gandhi Government Hospital have been shifted outside as the dousing operation continues. pic.twitter.com/k5c9YLLow8
— ANI (@ANI) April 27, 2022
Advertisement
ಇಲ್ಲಿಯವರೆಗೆ ಯಾವುದೇ ಸಾವು, ನೋವು ಅಥವಾ ಗಾಯಗಳ ವರದಿಯಾಗಿಲ್ಲ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.