ನವದೆಹಲಿ: ರಾಜೀವ್‌ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿರುವ ಸುಪ್ರೀಂ ಕೋರ್ಟ್ ತೀರ್ಪಿನಿಂದ ಉತ್ಸುಕವಾಗಿರುವ ಮತ್ತೋರ್ವ ಆರೋಪಿಯ ತಾಯಿ ನನ್ನ ಮಗಳೂ ಬಿಡುಗಡೆ ಆಗ್ತಾಳೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೋರ್ವ ಆರೋಪಿ ನಳಿನಿ ಅವರ 82 ವರ್ಷದ ತಾಯಿ ಪದ್ಮಾ ಶಂಕರನಾರಾಯಣನ್ ಈ ಕುರಿತು ಮಾತನಾಡಿದ್ದಾರೆ. 31 ವರ್ಷಗಳ ಬಳಿಕ ರಾಜೀವ್‌ಗಾಂಧಿ ಹಂತಕ ಪೆರಾರಿವಾಲನ್ ಅನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದು, ಪೆರಾರಿವಾಲನ್ ಕುಟುಂಬ ಸಂತೋಷವಾಗಿದೆ ಎಂದಿದ್ದಾರೆ. ಇದನ್ನೂ ಓದಿ: 31 ವರ್ಷಗಳ ನಂತರ ರಾಜೀವ್ ಗಾಂಧಿ ಹಂತಕ ಜೈಲಿನಿಂದ ಬಿಡುಗಡೆ
ಪೆರಾರಿವಾಲನ್ ಬಿಡುಗಡೆಗಾಗಿ ಅವನ ತಾಯಿ ಅರ್ಪುತಮ್ಮಾಳ್ ಸಾಕಷ್ಟು ನೋವು ಅನುಭವಿಸಿದ್ದರು. ತಮ್ಮ ಮಗನನ್ನು ಪಡೆಯಲು ಹಲವು ನಾಯಕರನ್ನು ಭೇಟಿ ಮಾಡಿದ್ದರು. ಆದರೆ, ನನ್ನ ಕುಟುಂಬಕ್ಕೆ ಅಂತಹ ಬೆಂಬಲವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಾರ್ದಿಕ್ ಪಟೇಲ್
ಪೆರಾರಿವಾಲನ್ ಬಿಡುಗಡೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆರೋಪಿ ಸ್ಥಾನದಲ್ಲಿರುವ ನಳಿನಿಗೆ ಮಗುವಿದ್ದ ಕಾರಣ ಆಕೆಗೆ ಮರಣದಂಡನೆ ತೆಗೆದುಹಾಕಿತು. ಇದೀಗ ಮತ್ತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ `ಉಳಿದ 6 ಮಂದಿ ಬಿಡುಗಡೆಗೆ ರಾಜ್ಯ ಸರ್ಕಾರ ಶ್ರಮಿಸಲಿದೆ’ ಎಂದು ಹೇಳಿದ್ದನ್ನು ಟಿವಿಯಲ್ಲಿ ನೋಡಿದ್ದೇನೆ. ಹಾಗಾಗಿ ನನ್ನ ಮಗಳೂ ಶೀಘ್ರದಲ್ಲೇ ಬಿಡುಗಡೆಯಾಗುತ್ತಾಳೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.