ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ‘ಜೈಲರ್’ (Jailer) ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳನ್ನ ಮಾಡುತ್ತಿದ್ದು, ಬ್ಯುಸಿಯಲ್ಲಿದ್ದಾರೆ. ಈ ನಡುವೆ ತಲೈವಾಗೆ ಅಭಿಮಾನಿಯೊಬ್ಬರು ಯಾರೂ ಊಹಿಸದ ವಿಶೇಷ ಉಡುಗೊರೆ ನೀಡಿದ್ದಾರೆ.
#WATCH | Tamil Nadu: A fan of actor Rajinikanth built a temple for him and installed a 250 kg idol of Rajinikanth, in Madurai (01/11) pic.twitter.com/pwAahbFdgx
— ANI (@ANI) November 1, 2023
ಕಾರ್ತಿಕ್ ಎಂಬ ಅಭಿಮಾನಿಯೊಬ್ಬರು (Rajinikanth Fans) ತಮಿಳುನಾಡಿನ ಮಧುರೈನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ತಲೈವಾಗೆ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ. ದೇವಸ್ಥಾನಲ್ಲಿ 250 ಕೆ.ಜಿ ತೂಕದ ರಜನಿಕಾಂತ್ ಅವರ ವಿಗ್ರಹ ನಿರ್ಮಿಸಲಾಗಿದೆ. ಕಾರ್ತಿಕ್ ಪುತ್ರಿ ಅನುಶಿಯಾ ಕೂಡ ರಜನಿಕಾಂತ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾರುಖ್ ಹುಟ್ಟುಹಬ್ಬ: ನಟನ ಮನೆಮುಂದೆ ಪೊಲೀಸ್ ಸರ್ಪಗಾವಲು
ಅಲ್ಲದೇ ಕಾರ್ತಿಕ್, ನಾನು ರಜನಿಕಾಂತ್ ಬಿಟ್ಟು ಬೇರೆ ಯಾವುದೇ ನಟರ ಸಿನಿಮಾ ನೋಡುವುದಿಲ್ಲ. ನಮಗೆ ಅವರೇ ದೇವರು. ಗೌರವದ ಸಂಕೇತಕ್ಕಾಗಿ ದೇವಾಲಯ ಕಟ್ಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಿಮಿಕ್ರಿ ಮಾಡಿದ ತುಕಾಲಿ ಸಂತು
ಸದ್ಯ ಜೈಲರ್ ಸಿನಿಮಾ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾಗಳನ್ನು ಮುಂದಿಟ್ಟುಕೊಂಡಿರುವ ರಜನಿಕಾಂತ್ ʻತಲೈವರ್ 170ʼ (Thalaivar 170) ಚಿತ್ರದಲ್ಲಿ ರಜನಿಕಾಂತ್‌ಗೆ ಬಿಗ್ ಬಿ ಜೊತೆಯಾಗುತ್ತಿದ್ದಾರೆ. 33 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗ್ತಿರೋದು ವಿಶೇಷ. ಈ ಬಗ್ಗೆ ಸ್ಪೆಷಲ್ ಪೋಸ್ಟ್‌ವೊಂದನ್ನ ತಲೈವಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ- ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ
ಟಿ.ಜಿ ಜ್ಞಾನವೇಲ್ ನಿರ್ದೇಶನದ, ಲೈಕಾ ಪ್ರೋಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ‘ತಲೈವರ್ 170’ ಚಿತ್ರದಲ್ಲಿ 33 ವರ್ಷಗಳ ನಂತರ ನಾನು ನನ್ನ ಗುರು ಶ್ರೀ ಅಮಿತಾಭ್ ಬಚ್ಚನ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ ಎಂಬುದಾಗಿ ರಜನಿಕಾಂತ್ ಹೇಳಿಕೊಂಡಿದ್ದಾರೆ.
Web Stories