ಟಾಲಿವುಡ್‌ನ ಲೆಜೆಂಡರಿ ಆ್ಯಕ್ಟರ್ ನಂದಮೂರಿ ಬಾಲಕೃಷ್ಣ ಚಿತ್ರರಂಗದಲ್ಲಿ 50 ವರ್ಷಗಳನ್ನ ಪೂರೈಸಿದ್ದಾರೆ. 1974ರಲ್ಲಿ ಬಿಡುಗಡೆಗೊಂಡ `ತಾತಮ್ಮ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂದಮೂರಿ ಬಾಲಕೃಷ್ಣ ಇಲ್ಲಿಗೆ ಭರ್ತಿ 50 ವರ್ಷಗಳನ್ನ ಕಂಪ್ಲೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಲೈವಾ ರಜನಿಕಾಂತ್ ಬಾಲಯ್ಯನಿಗೆ ಶುಭಾಷಯ ತಿಳಿಸಿದ್ದಾರೆ. `ಆ್ಯಕ್ಟಿಂಗ್ ಕಿಂಗ್, ಕಲೆಕ್ಷನ್ ಕಿಂಗ್, ಡೈಲಾಗ್ ಡೆಲಿವರಿ ಕಿಂಗ್, ಮೈ ಲವ್ಲಿ ಬ್ರದರ್ ಬಾಲಯ್ಯ 50 ವರ್ಷಗಳನ್ನ ಚಿತ್ರರಂಗದಲ್ಲಿ ಪೂರೈಸಿದ್ದಾರೆ. ಅವರಿಗೆ ದೇವರು ಆಯುರ್-ಆರೋಗ್ಯ ಕೊಟ್ಟು ಕಾಪಾಡಲಿ’ ಅಂತಾ ಜಾಲತಾಣದ ಮೂಲಕ ತಲೈವ ಹಾರೈಸಿದ್ದಾರೆ.
ನಂದಮೂರಿ ಬಾಲಕೃಷ್ಣರನ್ನ ಎಲ್ಲರೂ ಪ್ರೀತಿಯಿಂದ `ಬಾಲಯ್ಯ’ ಅಂತಲೇ ಕರೆಯುತ್ತಾರೆ. ಬಾಲಯ್ಯ ಈ ಐವತ್ತು ವರ್ಷಗಳಲ್ಲಿ 108 ಸಿನಿಮಾಗಳನ್ನ ಮಾಡಿದ್ದಾರೆ. ಇನ್ನು ಎರಡು ಸಿನಿಮಾಗಳು ಸದ್ಯ ಶೂಟಿಂಗ್ ನಡೆಯುತ್ತಿವೆ. ಒಟ್ಟು 110 ಸಿನಿಮಾಗಳನ್ನ ನಂದಮೂರಿ ಬಾಲಕೃಷ್ಣ ಮಾಡಿದ್ದಾರೆ. ಸಾಕಷ್ಟು ಕಾಂಟ್ರುವರ್ಸಿಗಳನ್ನ ಮಾಡಿಕೊಂಡಿದ್ದಾರೆ. ಆದ್ರೂ ಕೂಡಾ ಅಭಿಮಾನಿಗಳ ಬಳಗ ಮಾತ್ರ ಕಮ್ಮಿಯಾಗಿಲ್ಲ. ಇದನ್ನೂ ಓದಿ: ಕೈದಿ ನಂಬರ್ ಆಯ್ತು.. ಈಗ ದರ್ಶನ್ ಧರಿಸಿದ್ದ ಟೀ ಶರ್ಟ್ ಟ್ರೆಂಡ್
ತೆಲುಗು ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಬಾಲಯ್ಯ ಅವರಿಗೆ ಭಾರತಾದ್ಯಂತ ಅತೀ ದೊಡ್ಡ ಅಭಿಮಾನಿಗಳ ಬಳಗವಿದೆ. ಸಾಕಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ಬಾಲಯ್ಯ ನೀಡಿದ್ದಾರೆ. ಜೊತೆಗೆ ಬೇರೆ ಬೇರೆ ಭಾಷೆಯ ನಟರೊಂದಿಗೆ ಗೆಳೆತನವನ್ನ ಹೊಂದಿರುವ ನಟ ನಂದಮೂರಿ ಬಾಲಕೃಷ್ಣ ಡೈಲಾಗ್‌ಗೆ ಅಂತಾನೇ ಸಿನಿಮಾವನ್ನ ಕಾಯ್ತಿರುತ್ತೆ ಭಕ್ತಗಣ. ಇದನ್ನೂ ಓದಿ: ಕೇರಳ ಚಿತ್ರರಂಗ ಆಯ್ತು, ಟಾಲಿವುಡ್‌ನಲ್ಲೂ ಕಂಪನ; ʻದಿ ವಾಯ್ಸ್ ಆಫ್ ವುಮನ್ʼ ವರದಿ ಬಹಿರಂಗಕ್ಕೆ ಸಮಂತಾ ಒತ್ತಾಯ!
ಸದ್ಯ 50 ವರ್ಷಗಳನ್ನ ಸಿನಿಮಾ ಇಂಡಸ್ಟ್ರಿಯಲ್ಲಿ ಪೂರೈಸಿರುವ ಬಾಲಯ್ಯ ಇನ್ನು ಹೆಚ್ಚು ಹೆಚ್ಚು ಸಿನಿಮಾಗಳನ್ನ ಮಾಡಿ ಅಭಿಮಾನಿಗಳಿಗೆ ಮನರಂಜನೆ ನೀಡಲಿ. ಕಳೆದ ವರ್ಷ ಬಾಲಯ್ಯ ಅಭಿನಯದ ವೀರ ಸಿಂಹ ರೆಡ್ಡಿ ಹಾಗೂ ಭಗವಂತ್ ಕೇಸರಿ ಸಿನಿಮಾಗಳು ತೆರೆಗೆ ಬಂದಿದ್ದವು. ಆದ್ರೆ ಈ ವರ್ಷ ಅವರ ಸಿನಿಮಾಗಳಿಲ್ಲ, ಮುಂದಿನ ವರ್ಷಕ್ಕೆ ಎನ್‌ಬಿಕೆ109 ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ: ನಾನು ಪವರ್ ಗ್ರೂಪ್‌ನಲ್ಲಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ಹೇಮಾ ಕಮಿಷನ್ ವರದಿಗೆ ಮೋಹನ್‌ಲಾಲ್ ರಿಯಾಕ್ಷನ್