ಭಾರತೀಯ ಚಿತ್ರರಂಗ ಕಂಡ ಸ್ಟಾರ್ ನಟಿ ಶ್ರೀದೇವಿ. ಅವರ ಸೌಂದರ್ಯ, ಅಭಿನಯ ಚಾತುರ್ಯ ಅದೆಷ್ಟೇ ವರ್ಷಗಳು ಉರುಳಿದರೂ ಮಾಸದ ಸಾಧನೆ. ಶ್ರೀದೇವಿ (Sridevi) ಮರೆಯಾಗಿ ಅನೇಕ ವರ್ಷಗಳೇ ಉರುಳಿಹೋಗಿದೆ. ಹಿಂದಿ ಚಿತ್ರ ನಿರ್ಮಾಪಕ ಬೋನಿ ಕಪೂರ್‌ರನ್ನ (Boney Kapoor) ವಿವಾಹವಾಗಿ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದ ಶ್ರೀದೇವಿ ಮಕ್ಕಳನ್ನು ಸಿನಿಮಾರಂಗದಲ್ಲಿ ನೋಡುವ ಮುನ್ನವೇ ಕಣ್ಮುಚ್ಚಿದವರು. ಶ್ರೀದೇವಿ ಇದೀಗ ನೆನಪಷ್ಟೇ. ಆದರೆ ಅವರ ಅಂದ ಚೆಂದ ಸಾಧನೆಗೆ ಕ್ಲೀನ್‌ಬೌಲ್ಡ್ ಆಗಿದ್ದವರು ಒಬ್ಬರಿಬ್ಬರಲ್ಲ.
ಅಪಾರ ಅಭಿಮಾನಿಗಳ ಕನಸಿನ ರಾಣಿಯಾಗಿದ್ದ ಶ್ರೀದೇವಿ ಸೂಪರ್‌ಸ್ಟಾರ್‌ಗಳ ಕನಸಿನ ರಾಣಿಯೂ ಆಗಿದ್ದರು. ಈ ವಿಚಾರವಾಗಿ ಶ್ರೀದೇವಿ ನಿಧನದ ಬಳಿಕ ಹಲವರು ವಿಷಯ ಹೇಳಿಕೊಂಡಿದ್ದುಂಟು. ಇದೀಗ ಇಂಥಹ ಶ್ರೀದೇವಿಗೆ ಖ್ಯಾತ ನಟ ರಜನಿಕಾಂತ್ (Rajinikanth) ಫಿದಾ ಆಗಿದ್ದರು, ಪ್ರಪೋಸ್ ಮಾಡಲು ಇಚ್ಚಿಸಿದ್ದರು ಎಂಬ ಸುದ್ದಿ ವರದಿಯಾಗಿದೆ.
`ಮುಂಡ್ರು ಮುಡಿಚ್ಚು’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಶ್ರೀದೇವಿಯ ಸದ್ಗುಣ ಅಂದ ಚೆಂದ ನಟನೆಗೆ ಮೆಚ್ಚಿ ರಜನಿಕಾಂತ್ ಮನಸ್ಸಿನಲ್ಲೇ ಪ್ರೀತಿ ಬೆಳೆಸಿಕೊಂಡಿದ್ದರಂತೆ. ಪ್ರಪೋಸ್ ಮಾಡಲು ಒಂದೊಳ್ಳೆ ಸಮಯಕ್ಕಾಗಿ ಕಾದಿದ್ದರಂತೆ. ಹೀಗಿದ್ದಾಗ ಶ್ರೀದೇವಿ ಮನೆ ಗೃಹಪ್ರವೇಶದ ಕಾರ್ಯಕ್ರಮಕ್ಕೆ ರಜನಿಕಾಂತ್‌ರನ್ನ ಆಹ್ವಾನಿಸಿದ್ದರು.
ಆ ದಿನವೇ ಪ್ರಪೋಸ್ ಮಾಡಿದರೆ ಒಳ್ಳೆಯದು ಎಂದು ರಜನಿಕಾಂತ್ ಸಂಕಲ್ಪ ಮಾಡಿಕೊಂಡು ಹೋಗಿದ್ದರು. ಆದರೆ ರಜನಿಕಾಂತ್ ಮನೆಗೆ ಎಂಟ್ರಿ ಆಗುತ್ತಿದ್ದಂತೆ ವಿದ್ಯುತ್ ಕಟ್ ಆಗಿ ಮನೆಯಲ್ಲಾ ಕತ್ತಲು ಆವರಿಸಿಬಿಟ್ಟಿಡುತ್ತೆ ಆಗ ರಜನಿಕಾಂತ್ ಇದು ಶುಭ ಸೂಚಕವಲ್ಲ ಎಂದುಕೊಂಡು ತಮ್ಮ ಭಾವನೆಯನ್ನ ಅಲ್ಲಿಗೇ ನಿಲ್ಲಿಸಿ ಪ್ರಪೋಸ್ ಮಾಡದೆ ತಮ್ಮ ಮನೆಗೆ ಮರಳಿದ್ದರು. ಇದನ್ನೂ ಓದಿ: ತಮಿಳಿನ ಜನಪ್ರಿಯ ಹಾಸ್ಯನಟ ಮಧನ್ ಬಾಬ್ ನಿಧನ
ಈ ಘಟನೆಯ ಬಳಿಕ ರಜನಿಕಾಂತ್ ತಮ್ಮ ಸಹನಟಿ ಶ್ರೀದೇವಿ ಕುರಿತು ಯಾವುದೇ ಭಾವನೆಯನ್ನೂ ಮುಂದುವರೆಸದೆ ಪರಿಶುದ್ಧ ಸ್ನೇಹವನ್ನ ಮಾತ್ರ ಇಟ್ಟುಕೊಂಡು ಬಂದಿದ್ದರು. ಹೀಗೆಂದು ಕೆ. ಬಾಲಚಂದರ್ ಸಂದರ್ಶನವೊಂದರಲ್ಲಿ ಹೇಳಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಶ್ರೀದೇವಿ ವಿಚಾರವಾಗಿ ರಜನಿಕಾಂತ್ ಈ ವಿಚಾರವನ್ನ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಅಂದಹಾಗೆ ದಿವಂಗತ ಕೆ ಬಾಲಚಂದರ್ ರಜನಿಕಾಂತ್‌ಗೆ ಸಿನಿಮಾ ಗುರುವಾಗಿದ್ದವರು. ಇದೀಗ ಶ್ರೀದೇವಿ ಕೂಡ ಇಲ್ಲ, ಕೆ ಬಾಲಚಂದರ್ ಕೂಡ ಇಲ್ಲ. ಕಾಲ ಎಲ್ಲವನ್ನೂ ಮರೆಸಿದೆ.