ಚೆನ್ನೈ: ದಕ್ಷಿಣ ಭಾರತದ ತಲೈವಾ ರಜನಿಕಾಂತ್ ಗೆ ಈ ಸೋಮವಾರ ವಿಶೇಷ ದಿನವಾಗಿದ್ದು, ಡಬ್ಬಲ್ ಖುಷಿಯಲ್ಲಿದ್ದಾರೆ.
ರಜನಿಕಾಂತ್ ಅವರಿಗೆ ನಾಳೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಭಾರತೀಯ ಚಲನಚಿತ್ರ ಜಗತ್ತಿಗೆ ಅವರು ನೀಡಿದ ಅದ್ಭುತ ಕೊಡುಗೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.
Advertisement
Advertisement
ಈ ವಿಷಯವನ್ನು ಇದೇ ವರ್ಷದ ಏಪ್ರಿಲ್‍ನಲ್ಲಿ ಬಿಜೆಪಿ ರಾಜ್ಯಸಭಾ ಸಂಸದ ಪ್ರಕಾಶ್ ಜಾವಡೇಕರ್ ಅವರು ಮೊದಲು ಘೋಷಿಸಿದ್ದರು. ರಜನಿ 1975 ರಲ್ಲಿ ಕೆ.ಬಾಲಚಂದರ್ ಅವರ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತಮಿಳು ಚಿತ್ರರಂಗದಲ್ಲಿ 45 ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಜನರನ್ನು ರಂಜಿಸಿದ್ದಾರೆ ಮತ್ತು ರಂಜಿಸುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಸುರಕ್ಷಣೆಗಾಗಿ ಹೈದರಾಬಾದ್ ಪೊಲೀಸರ ವಿನೂತನ ಘಟಕ ಆರಂಭ
Advertisement
???????????????? pic.twitter.com/vkTf6mxYUu
— Rajinikanth (@rajinikanth) October 24, 2021
Advertisement
ತಮಿಳು ಸೂಪರ್‌ಸ್ಟಾರ್ ನಾಳೆಯ ಈವೆಂಟ್‍ಗೆ ಮುಂಚಿತವಾಗಿ ಟ್ವಿಟ್ಟರ್ ನಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದು ಮಾತ್ರವಲ್ಲದೇ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ನಾಳೆ ಪ್ರಾರಂಭಿಸಲಿದ್ದು, ಇದು ಜನರಿಗೆ ‘ಉಪಯುಕ್ತ ಅಪ್ಲಿಕೇಶನ್’ ಆಗಿರುತ್ತದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಅವರು, ಎರಡು ವಿಶೇಷ ಹೆಗ್ಗುರುತುಗಳೊಂದಿಗೆ ನಾಳೆ ನನಗೆ ಒಂದು ಮಹತ್ವದ ಸಂದರ್ಭವಾಗಿದೆ. ಮೊದಲನೆಯದು, ಜನರ ಪ್ರೀತಿ ಮತ್ತು ಬೆಂಬಲದಿಂದಾಗಿ ಭಾರತ ಸರ್ಕಾರವು ನನಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದು, ಜನರು ಈಗ ತಮ್ಮ ಧ್ವನಿಯ ಮೂಲಕ ತಮ್ಮ ಶುಭಾಶಯಗಳು ಮತ್ತು ಆಲೋಚನೆಗಳನ್ನು ತಮ್ಮ ಆಯ್ಕೆಯ ಯಾವುದೇ ಭಾಷೆಯಲ್ಲಿ ಬರೆಯಬಹುದು ಮತ್ತು ವ್ಯಕ್ತಪಡಿಸಬಹುದು ಎಂದು ಅವರ ಪುತ್ರಿ ಸೌಂದರ್ಯ ಅವರು ಪ್ರಾರಂಭಿಸುತ್ತಿರುವ ಅಪ್ಲಿಕೇಶನ್ ಬಗ್ಗೆ ಹೇಳಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
2019ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕಳೆದ ವರ್ಷ ಘೋಷಿಸಬೇಕಾಗಿತ್ತು ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2019ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಂತೆ ಇದನ್ನು ಮುಂದೂಡಲಾಯಿತು. 2018ರಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ದಾದಾಸಾಹೇಬ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ದಾದಾಸಾಹೇಬ್ ಫಾಲ್ಕೆಯು ಸಿನಿಮಾದಲ್ಲಿ ಮಾಡಿದ ಸಾಧನೆಯ ಶ್ರೇಷ್ಠತೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತೆ. ಈ ಪ್ರಶಸ್ತಿ ಚಲನಚಿತ್ರಗಳಲ್ಲಿ ನೀಡುವ ಅತ್ಯುನ್ನತ ಗೌರವವಾಗಿದೆ. ಈ ಗೌರವವನ್ನು ಸರ್ಕಾರದಿಂದ ನೀಡಲಾಗುತ್ತದೆ. ಭಾರತೀದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಸಹ ಪಡೆದಿರುವ ರಜನಿಕಾಂತ್ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR
ಎಆರ್ ಮುರುಗದಾಸ್ ಅವರ ‘ದರ್ಬಾರ್’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಜನಿ, ಶೀಘ್ರದಲ್ಲೇ ಅವರ ಬಹು ನಿರೀಕ್ಷಿತ ಚಿತ್ರ ‘ಅಣ್ಣತ್ತೆ’ ಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ದೀಪಾವಳಿಯಂದು ಈ ಚಿತ್ರ ರಿಲೀಸ್ ಮಾಡಲಾಗುತ್ತೆ ಎಂದು ಚಿತ್ರತಂಡ ತಿಳಿಸಿದೆ.