ಎದೆ ಮೇಲೆ ತಲೈವಾ ಭಾವಚಿತ್ರದ ಟ್ಯಾಟು ಹಾಕಿಸಿಕೊಂಡ ಹರ್ಭಜನ್ ಸಿಂಗ್

Public TV
1 Min Read
Rajinikanth 1

ನವದೆಹಲಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ತಲೈವಾ ರಜನಿಕಾಂತ್ ಅವರ ಭಾವಚಿತ್ರದ ಟ್ಯಾಟುವನ್ನು ತಮ್ಮ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ.

rajinikanth

ಹರ್ಭಜನ್ ಸಿಂಗ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ. ಭಾನುವಾರದಂದು ರಜನಿಕಾಂತ್ ಅವರ 71ನೇ ಹುಟ್ಟುಹಬ್ಬದಂದು, ಹರ್ಭಜನ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪೆಷಲ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇದನ್ನೂ ಓದಿ: ನಾನು ಬಿಜೆಪಿ ಸೇರುವುದು Fake News: ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್ ಅವರು ತಮ್ಮ ಎದೆಯ ಎಡಭಾಗದಲ್ಲಿ ಮಾಡಿದ ರಜನಿಕಾಂತ್ ಅವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿ, ನೀವು ನನ್ನ ಹೃದಯದ ಸೂಪರ್‍ಸ್ಟಾರ್. ನೀವು ಎಂಬತ್ತರ ದಶಕದ ಬಿಲ್ಲಾ. ನೀವು ತೊಂಬತ್ತರ ಬಾಷಾ. ನೀವು 2ಕೆ ಅಣ್ಣಾತ್ತೆ. ಒಬ್ಬನೇ ಸೂಪರ್‍ಸ್ಟಾರ್‍ಗೆ ನನ್ನ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದರು. ಈ ಫೋಸ್ಟ್ ಇದೀಗ ವೈರಲ್ ಆಗುತ್ತಿದೆ. ಒಬ್ಬ ಸೆಲೆಬ್ರಿಟಿ ಮತ್ತೊಬ್ಬ ಸೆಲೆಬ್ರಿಟಿ ಸ್ಟಾರ್ ಕುರಿತಾಗಿ ಅಭಿಮಾನವನ್ನು ಹೊಂದಿರುವುದಕ್ಕಾಗಿ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

harbhajan singh

ರಜನಿಕಾಂತ್ ಅವರಿಗೆ 71 ವರ್ಷ. ನಟ ತನ್ನ ಅಸಾಧಾರಣ ನಟನಾ ಶೈಲಿ ಮತ್ತು ವಿಶಿಷ್ಟವಾದ ಆನ್-ಸ್ಕ್ರೀನ್ ಮ್ಯಾನರಿಸಂಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ಅಭಿಮಾನಿಗಳ ಬಳಗ ಸಾಕಷ್ಟು ದೊಡ್ಡದಾಗಿದೆ. ಇವರ ಅಭಿಮಾನಿಗಳ ಸಾಲಿನಲ್ಲಿ ಹರ್ಭಜನ್ ಸಿಂಗ್ ಮೊದಲನೇಯ ಸ್ಥಾನದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *