ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಪೇಟಾ’ ಸಿನಿಮಾದ ಕ್ರೇಜ್‍ನಿಂದ ಥಿಯೇಟರ್ ಹೊರಗೆ ಜೋಡಿ ಮದುವೆಯಾದ ಅಪರೂಪದ ಕ್ಷಣವೊಂದು ಚೆನ್ನೈನಲ್ಲಿ ನಡೆದಿದೆ.
ರಜನಿಕಾಂತ್ ಅಭಿಮಾನಿಗಳಾಗಿರುವ ಅನ್‍ಬರಸುರ್ ಹಾಗೂ ಕಾಮಾಕ್ಷಿ ರಾಯಪೇಟೆಯಲ್ಲಿರುವ ವುಡ್‍ಲ್ಯಾಂಡ್ ಚಿತ್ರಮಂದಿರದ ಹೊರಗೆ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗಾಗಿಯೇ ಚಿತ್ರಮಂದಿರದ ಹೊರಗೆ ಒಂದು ವೇದಿಕೆಯನ್ನು ಕೂಡ ನಿರ್ಮಿಸಲಾಗಿತ್ತು.
- Advertisement 2-
- Advertisement 3-
ಅನ್‍ಬರಸುರ್ ಹಾಗೂ ಕಾಮಾಕ್ಷಿ ಮದುವೆ ಬಳಿಕ ಚಿತ್ರ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರಿಗೆ ಊಟವನ್ನು ಸಹ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಸಿನಿಮಾ ಶುರುವಾಗುವ ಮೊದಲೇ ಅನ್‍ಬರಸುರ್, ಕಾಮಾಕ್ಷಿ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ. ಬಳಿಕ ಅದೇ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.
- Advertisement 4-
ಪೇಟಾ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಟ ವಿಜಯ್ ಸೇತುಪತಿ, ಸಸಿಕುಮಾರ್, ಸಿಮ್ರಾನ್, ತ್ರಿಷಾ, ಮಹೇಂದ್ರನ್, ಬಾಬಿ ಸಿಂಹ ಹಾಗೂ ಗುರು ಸೋಮಸುಂದರಂ ನಟಿಸಿದ್ದಾರೆ.
#Watch: Superstar @rajinikanth's craze is so much that two of his fans got married today at a movie theatre in #Chennai.#GetRajinified #PettaFDFS #Petta pic.twitter.com/3ci3Uo76Dz
— @zoomtv (@ZoomTV) January 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv