ಬೆಂಗಳೂರು: ಲೋಕಸಭಾ ಚುನಾವಣೆಯ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ರಾಜಗುರು ದ್ವಾರಕನಾಥ್ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ರಾತ್ರೋರಾತ್ರಿ ಭೇಟಿ ಮಾಡಿದ್ದು ಸತತ 4 ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ. ಜ್ಯೋತಿಷಿ ಮಾತು ಕೇಳಿ ಅಪ್ಪ ಕುಮಾರಸ್ವಾಮಿ, ಮಗ ನಿಖಿಲ್ ಟೆನ್ಶನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
Advertisement
ಮಾರ್ಚ್ 29ರ ಬಳಿಕ ನಿಖಿಲ್ ಜಾತಕದಲ್ಲಿ ಗುರು ಸ್ಥಾನ ಬದಲಾವಣೆ ಮಾಡುತ್ತಾರೆ. ಒಳ್ಳೆಯ ಗಳಿಗೆಯಲ್ಲಿ ಮಂಡ್ಯದಿಂದ ನಾಮಪತ್ರ ಸಲ್ಲಿಸಿ, ಸದ್ಯಕ್ಕೆ ರಾಜಕೀಯ ಜೀವನದಲ್ಲಿ ಕಷ್ಟ ಇದೆ ಎಂದು ಜ್ಯೋತಿಷಿ ದ್ವಾರಕನಾಥ್ ಹೇಳಿದ್ದಾರೆ ಎನ್ನಲಾಗಿದೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜಗುರು ದ್ವಾರಕನಾಥ್ ಅವರು, ಇದು ಕುಮಾರಸ್ವಾಮಿ ಅವರದ್ದು ಸೌಹಾರ್ಧ ಭೇಟಿ ಅಷ್ಟೇ. 2107ರಲ್ಲೆ ನಾನು ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ಹೇಳಿದ್ದೆ, ಅದರಂತೆ ಆಗಿದ್ದಾರೆ. ಅವರಿಗೆ ಶೃಂಗೇರಿ ಶಾರದಾಂಬೆ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಇದೆ ಎಂದರು.
Advertisement
ಸಿಎಂ ಪುತ್ರ ಕೂಡ ಸ್ಪರ್ಧೆ ಮಾಡುತ್ತಾ ಇದ್ದೀನಿ ಅಂದ್ರು. ಅದನ್ನು ಬೇಡಾ ಅನ್ನೋದಕ್ಕೆ ಆಗಲ್ಲ. ಹೀಗಾಗಿ ಚುನಾವಣೆಗೆ ನಿಲ್ಲು ಎಂದು ಆಶೀರ್ವಾದ ಮಾಡಿದ್ದೇನೆ. ನೀವು ಗೆಲ್ಲುವುದಕ್ಕೆ ಶಾರದಾಂಬೆ, ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹ ಇದೆ. ಯುದ್ಧನೇ ಶುರುವಾಗದೆ, ಯಾರು ಗೆಲ್ಲುತ್ತಾರೆ ಎಂದು ಹೇಳುವುದಕ್ಕೆ ಆಗಲ್ಲ. ಯಾರು ನಾಮಪತ್ರ ಸಲ್ಲಿಸುತ್ತಾರೆ ಎಂದು ನೋಡಿ ಹೇಳಬಹದು ಎಂದು ರಾಜಗುರು ದ್ವಾರಕನಾಥ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv