ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಟಗಾರ ಕನ್ನಡಿಗ ಲುವ್ನಿತ್ ಸಿಸೋಡಿಯಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಂದಿದ್ದಾರೆ.
ಲುವ್ನಿತ್ ಸಿಸೋಡಿಯಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ತಂಡದಿಂದ ಹೊರನಡೆದಿದ್ದಾರೆ. ಅವರ ಬದಲಿಗೆ ರಜತ್ ಪಟಿದಾರ್ ತಂಡಕ್ಕೆ ಮರಳಿದ್ದಾರೆ. ಪಟಿದಾರ್ ದೇಶೀಯ ಕ್ರಿಕೆಟ್‍ನಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಿದ್ದರು.
Advertisement
Advertisement
ಇದುವರೆಗೆ 31 ಟಿ20 ಪಂದ್ಯಗಳನ್ನು ಆಡಿರುವ ಪಟಿದಾರ್ 7 ಅರ್ಧಶತಕ ಗಳಿಸಿ ಒಟ್ಟು 861 ರನ್ ಗಳಿಸಿದ್ದಾರೆ. ಈ ಹಿಂದೆ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದರು. ಕಳೆದ ವರ್ಷ ಆರ್‌ಸಿಬಿ ಪರ ರಜತ್ ಪಾಟಿದಾರ್ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಆರ್‌ಸಿಬಿ ಪರ 4 ಇನ್ನಿಂಗ್ಸ್ ಆಡಿ 71ರನ್ ಗಳಿಸಿ ಭರವಸೆ ಮೂಡಿಸಿದ್ದರು. ಅವರ ಗರಿಷ್ಠ ಸ್ಕೋರ್ 31 ಆಗಿತ್ತು. ಇದನ್ನೂ ಓದಿ: ಪಂಜಾಬ್ ರಾಜರ ಮುಂದೆ ನಡೆಯಲಿಲ್ಲ ಸೂಪರ್ ಕಿಂಗ್ಸ್ ಆಟ – ಚೆನ್ನೈಗೆ ಹ್ಯಾಟ್ರಿಕ್ ಸೋಲು
Advertisement
Advertisement
ಈ ಬಾರಿಯ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನ ನೀಡಿದೆ. ಈವರೆಗೆ ಆರ್‌ಸಿಬಿ ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಕಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಅಮೊಘ ಬ್ಯಾಟಿಂಗ್ ಪ್ರದರ್ಶನ ತೋರಿ 210 ರನ್ ಕಲೆಹಾಕಿದರೂ ಬೌಲಿಂಗ್ ವೈಫಲ್ಯದಿಂದಾಗಿ ಗೆಲುವು ಸಾಧಿಸಲಿಲ್ಲ. ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ನೈಟ್ ರೈಡರ್ಸ್ ವಿರುದ್ಧದ ರೋಚಕ ಕದನದಲ್ಲಿ 3 ವಿಕೆಟ್ ಗಳಿಂದ ಗೆದ್ದುಬೀಗಿದೆ. ನಾಳೆ(ಏ.5)ರಂದು ಆರ್‌ಸಿಬಿ , ರಾಜಸ್ಥಾನ ರಾಯಲ್ಸ್ ತಂಡದ ಸವಾಲು ಎದುರಿಸಲಿದೆ. ಇದನ್ನೂ ಓದಿ: ಡೆಲ್ಲಿಗೆ ಟಕ್ಕರ್ ನೀಡಿದ ಟೈಟಾನ್ಸ್ – ಗುಜರಾತ್‍ಗೆ ಭರ್ಜರಿ ಜಯ