ಜೈಪುರ್: ಎರಡು ವರ್ಷಗಳ ಹಿಂದೆ ಬಾರ್ಮರ್‌ನ ಮಾಜಿ ಶಾಸಕ ಹಾಗೂ ಕಾಂಗ್ರೆಸ್ (Congress) ಮುಖಂಡ ಮೇವರಂ ಜೈನ್ (Mevaram Jain) ಮತ್ತು ಆರ್‌ಪಿಎಸ್ ಅಧಿಕಾರಿ ಆನಂದ್ ಸಿಂಗ್ ರಾಜಪುರೋಹಿತ್ ಸೇರಿದಂತೆ ಒಂಬತ್ತು ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ತನ್ನ ಮಗಳಿಗೂ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬಳು ಆರೋಪಿಸಿ ಪ್ರಕರಣ ದಾಖಲಿಸಿದ್ದಾಳೆ.
ಆರೋಪಿಗಳು ತನ್ನ ಅಪ್ರಾಪ್ತ ವಯಸ್ಸಿನ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿದ್ದು, ಇತರ ಹುಡುಗಿಯರನ್ನು ತಮ್ಮ ಬಳಿಗೆ ಕರೆತರುವಂತೆ ತನ್ನ ಮೇಲೆ ಒತ್ತಡ ಹೇರಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಜೋಧಪುರದ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡಿವೋರ್ಸ್ ಕೇಳಿದವನಿಗೆ ಕೋರ್ಟ್ ಆವರಣದಲ್ಲೇ ಹಲ್ಲೆ – ನಾಲ್ವರು ಜೈಲಿಗೆ
ಆರೋಪಿಗಳಲ್ಲಿ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳಾದ ಬಾರ್ಮರ್ ಎಸ್‍ಎಚ್‍ಒ ಗಂಗಾರಾಮ್ ಖಾವಾ ಮತ್ತು ಸಬ್ ಇನ್ಸ್‍ಪೆಕ್ಟರ್ ದೌದ್ ಖಾನ್ ಹಾಗೂ ಪ್ರಧಾನ್ ಗಿರ್ಧಾರಿ ಸಿಂಗ್ ಸೋಧಾ ಸೇರಿದ್ದಾರೆ. ಎಫ್‍ಐಆರ್ ನ್ನು ದೃಢೀಕರಿಸಿದ ಎಸ್‍ಎಚ್‍ಒ ಶಕೀಲ್ ಅಹ್ಮದ್, ಜೈನ್ ಮತ್ತು ಇತರ 8 ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ, ಬೆದರಿಕೆ ಮತ್ತು ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
2021 ರಿಂದ ಜೈನ್ ತನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಜೈನ್ ಅವರನ್ನು ಪರಿಚಯಿಸಿದ ರಾಮ್ ಸ್ವರೂಪ್ ಐದು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಮಹಿಳೆ ತನ್ನ ತಂದೆಯ ಅನಾರೋಗ್ಯದ ವಿಚಾರಕ್ಕೆ ಐದು ವರ್ಷಗಳ ಹಿಂದೆ ಸಹಾಯ ಕೇಳಿಕೊಂಡು ಮೇವರಂ ಜೈನ್ ಬಳಿ ಹೋಗಿದ್ದಳು. ಇದನ್ನೇ ಬಳಸಿಕೊಂಡು ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ನಿರಂತರವಾಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 2 ನಿಮಿಷ ನಿನ್ನ ಧ್ವನಿ ಕೇಳಬೇಕೆಂದು ಫೋನ್ ಮಾಡಿದ್ದ ಪತಿ ಸೂಸೈಡ್ ಮಾಡ್ಕೊಂಡ!