ತವರಿನಲ್ಲೇ ಪಾಂಡ್ಯ ಪಡೆಗೆ ಹೀನಾಯ ಸೋಲು – ರಾಜಸ್ಥಾನ್‌ ರಾಯಲ್ಸ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ

Public TV
2 Min Read
Rajasthan Royals

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) ಟೂರ್ನಿಯ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹ್ಯಾಟ್ರಿಕ್‌ ಸೋಲನುಭವಿಸಿದೆ. ತವರಿನಲ್ಲೇ ಮುಂಬೈ (Mumbai Indians) ತಂಡದ ಹೀನಾಯ ಸೋಲು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಇತ್ತ ರಾಜಸ್ಥಾನ್‌ ರಾಯನ್ಸ್‌ (Rajasthan Royals) 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 125 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. 126 ರನ್‌ ಗುರಿ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ 15.3 ಓವರ್‌ ಇರುವಾಗಲೇ 4 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿ ಸುಲಭ ಜಯ ಸಾಧಿಸಿತು. ಇದನ್ನೂ ಓದಿ: IPL 2024: ಮಹಿ ಬ್ಯಾಟಿಂಗ್‌ ಕಿಚ್ಚಿಗೂ ಬೆಚ್ಚದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 20 ರನ್‌ಗಳ ಜಯ

Riyan Parag

ಟಾಸ್‌ ಗೆದ್ದ ಸ್ಯಾಮ್ಸನ್‌ ಪಡೆ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆರಂಭಿಸಿದ ಮುಂಬೈ ತಂಡ ಕಳಪೆ ಪ್ರದರ್ಶನ ನೀಡಿತು. ಮುಂಬೈ ತಂಡದ ಆರಂಭಿಕ ಆಟಗಾರರು ನ್ಯೂಜಿಲೆಂಡ್‌ ವೇಗಿ ಟ್ರೆಂಟ್‌ ಬೌಲ್ಟ್‌ ದಾಳಿಗೆ ಧೂಳಿಪಟವಾದರು. ರೋಹಿತ್‌ ಶರ್ಮಾ, ನಮನ್‌ ಧೀರ್‌, ಡೆವಾಲ್ಡ್‌ ಬ್ರೆವಿಸ್‌ ಬ್ಯಾಟರ್‌ಗಳು ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತು.

ಮುಂಬೈ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ 21 ಎಸೆತಕ್ಕೆ 34 ರನ್‌ (6 ಬೌಂಡರಿ) ಗಳಿಸಿದರು. ತಿಲಕ್‌ ವರ್ಮಾ 32, ಟಿಮ್‌ ಡೇವಿಡ್‌ 17, ಇಶಾನ್‌ ಕಿಶನ್‌ 16 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಇದನ್ನೂ ಓದಿ: ಕಳಪೆ ಪ್ರದರ್ಶನದಿಂದ ಶಾಹೀನ್‌ ಶಾಗೆ ತಲೆದಂಡ – ಮತ್ತೆ ನಾಯಕನ ಪಟ್ಟಕ್ಕೇರಿದ ಬಾಬರ್‌ ಆಜಂ

Yuzvendra Chahal Trent Boult

ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೌಲ್ಟ್‌ ಹಾಗೂ ಯಜುವೇಂದ್ರ ಚಾಹಲ್‌ ತಲಾ 3 ವಿಕೆಟ್‌ ಗಳಿಸಿ ಅಬ್ಬರಿಸಿದರು. ನಾಂದ್ರೆ ಬರ್ಗರ್‌ 2, ಆವೇಶ್‌ ಖಾನ್‌ ಒಂದು ವಿಕೆಟ್‌ ಪಡೆದರು.

Rajasthan Royals Mumbai Indians

ಪರಾಗ್‌ ಮಿಂಚು
ಮುಂಬೈ ತಂಡ ನೀಡಿದ 126 ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಸುಲಭ ಜಯ ಸಾಧಿಸಿತು. ರಿಯಾನ್‌ ಪರಾಗ್‌ ಅರ್ಥಶತಕ (54 ರನ್‌, 39 ಬಾಲ್‌, 5 ಫೋರ್‌, 3 ಸಿಕ್ಸರ್‌) ಬಾರಿಸಿ ಗಮನ ಸೆಳೆದರು. ಇದನ್ನೂ ಓದಿ: ಹೈದರಾಬಾದ್‌ ಪಾಲಿಗೆ ಕಿಲ್ಲರ್‌ ಆದ ಮಿಲ್ಲರ್‌ – ಗುಜರಾತ್‌ ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ

ಆರಂಭಿಕರಾಗಿ ಕಣಕ್ಕಿಳಿದಿದ್ದ ಜೈಶ್ವಾಲ್‌ ಲಯ ಕಾಯ್ದುಕೊಳ್ಳುವಲ್ಲಿ ಎಡವಿದರು. ಮೊದಲ ಓವರ್‌ನಲ್ಲೇ ಬ್ಯಾಕ್‌ ಟು ಬ್ಯಾಕ್‌ 2 ಫೋರ್‌ ಬಾರಿಸಿ ಭರವಸೆ ಮೂಡಿಸಿದ್ದ ಹೊತ್ತಲ್ಲೇ ಜೈಶ್ವಾಲ್ ಮೊದಲ ಓವರ್‌ ಮುಕ್ತಾಯಕ್ಕೆ ವಿಕೆಟ್‌ ಕೈಚೆಲ್ಲಿ ಪೆವಿಲಿಯನ್‌ ಸೇರಿದರು. ಜೋಶ್‌ ಬಟ್ಲರ್‌ 13, ನಾಯಕ ಸಂಜು ಸ್ಯಾಮ್ಸನ್‌ 12 ರನ್‌ ಗಳಿಸಿ ಔಟಾಗಿದ್ದು ತಂಡಕ್ಕೆ ಆಘಾತ ನೀಡಿತ್ತು. ಈ ಸಂದರ್ಭದಲ್ಲಿ ಎಂಟ್ರಿ ಕೊಟ್ಟ ರಿಯಾನ್‌ ಪರಾಗ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡದ ಸುಲಭ ಜಯಕ್ಕೆ ಕಾರಣರಾದರು. ಆರ್‌.ಅಶ್ವಿನ್‌ 16, ಶುಭಂ ದುಬೆ ಔಟಾಗದೇ 8 ರನ್‌ ಗಳಿಸಿದರು. ಮುಂಬೈ ತಂಡದ ಪರ ಆಕಾಶ್ ಮಧ್ವಲ್ ವಿಕೆಟ್‌ ಕಿತ್ತು ಗಮನ ಸೆಳೆದರು.

Share This Article