– ಕೊನೇ ಓವರ್‌ನಲ್ಲಿ 20 ರನ್ ಚಚ್ಚಿದ ಮಹಿ
– ಪುಟಿದೆದ್ದ ಪಂತ್ – ವಾರ್ನರ್, ಶಾ ಬ್ಯಾಟಿಂಗ್‌ಗೆ ಕಂಗಾಲಾದ ಸಿಎಸ್‌ಕೆ
ವಿಶಾಖಪಟ್ಟಣಂ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರ ಮಿಂಚಿನ ಬ್ಯಾಟಿಂಗ್ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2024ರ ಐಪಿಎಲ್ ಆವೃತ್ತಿಯಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ತಂಡ ಗೆಲುವಿನ ಖಾತೆ ತೆರೆದಿದೆ.
ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು. 192 ರನ್‌ಗಳ ಗುರಿ ಪಡೆ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
Advertisement
Advertisement
ಡೆಲ್ಲಿ ಕ್ಯಾಪಿಟಲ್ಸ್, ಸಿಎಸ್‌ಕೆ ನಡುವಿನ ಪಂದ್ಯ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಡೆವಿಡ್ ವಾರ್ನರ್ , ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಅಬ್ಬರ, ಪತಿರಾಣ ಅದ್ಬುತ ಕ್ಯಾಚ್, 42ನೇ ವಯಸ್ಸಿನಲ್ಲೂ ಚಿರಯುವಕನಂತೆ ಮಹಿ ಸಿಕ್ಸರ್ ಬೌಂಡರಿ ಆಟ ಇವೆಲ್ಲವೂ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಕೊನೇ ಓವರ್‌ನಲ್ಲಿ ಸಿಕ್ಸರ್-ಬೌಂಡರಿ ಚಚ್ಚಿದ ಮಹಿ ಒಂದೇ ಓವರ್‌ನಲ್ಲಿ 20 ರನ್ ಸಿಡಿಸಿದರು.
Advertisement
ಆರಂಭದಲ್ಲೇ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದು ಸಿಎಸ್‌ಕೆ ತಂಡದ ಸೋಲಿಗೆ ಕಾರಣವಾಯಿತು. ಮೊದಲ 2.5 ಓವರ್‌ಗಳಲ್ಲೇ ಕೇವಲ 7 ರನ್‌ಗಳಿಗೆ 2 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಬಳಿಕ ಡೇರಿಲ್ ಮಿಚೆಲ್, ಅಜಿಂಕ್ಯಾ ರಹಾನೆ ಸ್ಫೋಟಕ ಬ್ಯಾಟಿಂಗ್‌ನಿಂದ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರೂ ವಿಫಲವಾಯಿತು.
Advertisement
ಸಿಎಸ್‌ಕೆ ಪರ ನಾಯಕ ರುತುರಾಜ್ 1 ರನ್, ರಚಿನ್ ರವಿಂದ್ರ 12 ಎಸೆತಗಳಲ್ಲಿ 2 ರನ್, ಅಜಿಂಕ್ಯಾ ರಹಾನ್ 45 ರನ್, ಡೇರಿಲ್ ಮಿಚೆಲ್ 34 ರನ್, ಶಿವಂ ದುಬೆ 18 ರನ್, ರವೀಂದ್ರ ಜಡೇಜಾ 21 ರನ್ ಗಳಿಸಿದರೆ, 231 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಎಂ,ಎಸ್ ಧೋನಿ 16 ಎಸೆತಗಳಲ್ಲಿ 37 ರನ್ ಬಾರಿಸಿದರು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ಫೀಲ್ಡಿಂಗ್ ಮಾಡುವ ಅವಕಾಶವನ್ನು ಡೆಲ್ಲಿ ತಂಡಕ್ಕೆ ಬಿಟ್ಟುಕೊಟ್ಟಿತು. ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್ ಶುರು ಮಾಡಿದ ಡೆಲ್ಲಿ ತಂಡ ಸಿಎಸ್‌ಕೆ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಮೊದಲ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಜೋಡಿ 9.3 ಓವರ್‌ಗಳಲ್ಲಿ 93 ರನ್‌ಗಳ ಜೊತೆಯಾಟ ನೀಡಿತ್ತು. ಇದು ಡೆಲ್ಲಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ದ ವಾರ್ನರ್ ಮತ್ತೊಂದು ಸ್ಫೋಟಕ ಹೊಡೆತಕ್ಕೆ ಮುಂದಾಗಿ ಮಥೀಶ ಪತಿರಾಣಗೆ ಕ್ಯಾಚ್ ನೀಡಿದರು.
ಡೇವಿಡ್ ವಾರ್ನರ್ 35 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಪೃಥ್ವಿ ಶಾ ವಿಕೆಟ್ ಪತನಗೊಂಡಿತು ಕೇವಲ 27 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 43 ರನ್ ಸಿಡಿಸಿ ಶಾ ಔಟಾದರು. ಬಳಿಕ ಕಣಕ್ಕಿಳಿದ ನಾಯಕ ರಿಷಬ್ ಪಂತ್ ಬ್ಯಾಟಿಂಗ್ ಸಹ ಡೆಲ್ಲಿ ತಂಡದ ಕೈಹಿಡಿಯಿತು. 14 ದಿನಗಳ ಬಳಿಕ ಐಪಿಎಲ್ ಅಂಗಳದಲ್ಲಿ ಆಡುತ್ತಿರುವ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಪಂತ್ 31 ಎಸೆತದಲ್ಲಿ 51 ರನ್ (3 ಸಿಕ್ಸರ್, 4 ಬೌಂಡರಿ) ಸಿಡಿಸಿದರು.
ಆರಂಭಿಕರು ಹಾಗೂ ಪಂತ್ ವಿಕೆಟ್ ಕಳೆದುಕೊಂಡ ಬಳಿಕ ಡೆಲ್ಲಿ ತಂಡದ ರನ್ ವೇಗದ ಗತಿಯೂ ಕಡಿಮೆಯಾಯಿತು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಬ್ಬರದಿಂದ ಡೆಲ್ಲಿ 191 ರನ್‌ಗಳ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.
ಸಿಎಸ್‌ಕೆ ಪರ ಅದ್ಭುತ ಕ್ಯಾಚ್ ಹಿಡಿದ ಮಥೀಶ ಪತಿರಾಣ 3 ವಿಕೆಟ್ ಕಬಳಿಸಿ ಮಿಂಚಿದರು. ರವೀಂದ್ರ ಜಡೇಜಾ ಹಾಗೂ ಮುಸ್ತಫಿಜೂರ್ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.