ಜೈಪುರ: ರಾಜಸ್ಥಾನ ರಾಜ್ಯದ ಸಿಕಾರ್ ಜಿಲ್ಲೆಯ ಕೀರೋ ಕಿ ಧನಿ ಹಳ್ಳಿಯಲ್ಲಿನ ಯುವಕರನ್ನು ಮದುವೆಯಾಗಲು ಯುವತಿಯರು ನಿರಾಕರಿಸುತ್ತಿದ್ದಾರೆ.
ಕೀರೋ ಕಿ ಧನಿ ಗ್ರಾಮದಲ್ಲಿ ನೀರಿನ ಅಭಾವವಿದ್ದು, ಹನಿ ನೀರಿಗೂ ಅಲ್ಲಿ ಪರದಾಡಬೇಕು. ಒಂದು ವೇಳೆ ಈ ಗ್ರಾಮಕ್ಕೆ ಮದುವೆಯಾಗಿ ಬಂದರೆ ನೀರು ಹೊರುವುದರಲ್ಲೇ ಜೀವನ ಸಾಗುತ್ತದೆ ಎಂಬ ಭಯದಿಂದ ಪೋಷಕರು ತಮ್ಮ ಪುತ್ರಿಯರನ್ನು ಇಲ್ಲಿಯ ಯುವಕರೊಂದಿಗೆ ಮದುವೆ ಮಾಡಿಸುತ್ತಿಲ್ಲ. ಕೆಲ ಯುವತಿಯರು ಕೀರೋ ಕಿ ಧನಿ ಗ್ರಾಮದ ಹುಡುಗ ಎಂದು ತಿಳಿದ್ರೆ ಸಾಕು ಈ ಮದುವೆ ಬೇಡ ಎಂದು ಹೇಳುತ್ತಾರೆ ಅಂತ ಗ್ರಾಮಸ್ಥರು ಹೇಳುತ್ತಾರೆ.
Advertisement
ಈ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಒಂದೇ ಕೊಳವೆ ಬಾವಿಯಿದ್ದು, ಹಳ್ಳಿಯ 50 ಕುಟುಂಬಕ್ಕೂ ಅದೇ ನೀರಿನ ಮೂಲ. ಕೆಲವೊಮ್ಮೆ ಈ ಕೊಳವೆಬಾವಿಯಲ್ಲಿಯೂ ನೀರು ಸಿಗುವುದಿಲ್ಲ. ಹೀಗಾಗಿ ಕೆಲವೊಮ್ಮೆ ಕಿ.ಮೀ ಗಟ್ಟಲೆ ನೀರಿಗಾಗಿ ನಡೆಯುವ ಪರಿಸ್ಥಿತಿಗಳು ಎದುರಾಗುತ್ತವೆ.
Advertisement
ನಾನು ನನ್ನ ಇಬ್ಬರು ಮಕ್ಕಳಿಗೆ ಮದುವೆ ಮಾಡಲು ಎರಡು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇಲ್ಲಿ ನೀರಿಲ್ಲದ ಕಾರಣ ಮದುವೆ ಮುರಿದು ಬೀಳುತ್ತಿದೆ. ಇತ್ತೀಚೆಗಷ್ಟೆ ನನ್ನ ದೊಡ್ಡ ಮಗನಿಗೆ ಒಂದು ಕಡೆ ಒಪ್ಪಿಗೆಯಾಗಿದೆ. ಆದರೆ ಅವರು ಇಲ್ಲಿನ ಪರಿಸ್ಥಿತಿ ಕಂಡೂ ಮದುವೆ ಮಾಡುತ್ತಾರೆಂಬ ಭರವಸೆ ನನಗಿಲ್ಲ ಎಂದು ಗ್ರಾಮಸ್ಥೆ ರೇಖಾ ಹೇಳುತ್ತಾರೆ.
Advertisement
Advertisement
ಗ್ರಾಮದ ಯುವಕ ನೇಮಿ ಚಂದ್, ನೀರಿಲ್ಲದ ಈ ಊರಿಗೆ ಮದುವೆಯಾಗಲು ಯಾರು ತಾನೆ ಬಯಸುತ್ತಾರೆ. ನನ್ನ ತಂದೆ-ತಾಯಿ ತುಂಬಾ ಪ್ರಯತ್ನ ಮಾಡಿ ಮದುವೆ ನಿಶ್ಚಯಿಸಿರುತ್ತಾರೆ. ಆದರೆ ನೀರಿಲ್ಲದ ಕಾರಣ ಎಲ್ಲ ಸಂಬಂಧಗಳು ಹಿಂದೆ ಸರಿದಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]