ಜೈಪುರ: ರಾಜಸ್ಥಾನದಲ್ಲಿ ಪುರುಷರ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯ ಅತ್ಯಾಚಾರ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಗಳಲ್ಲಿ ನಮ್ಮ ರಾಜ್ಯ ನಂಬರ್ ಒನ್ ಆಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ನಮ್ಮ ರಾಜ್ಯ ಏಕೆ ಮುಂದಿದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ರಾಜಸ್ಥಾನವು ಪುರುಷರು ಹೆಚ್ಚಾಗಿರುವ ರಾಜ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆಯಲ್ಲಿ ನಾವು ಫೋರ್ ಹೊಡೆಯುತ್ತೇವೆ: ಅಶ್ವಥ್ ನಾರಾಯಣ
Advertisement
ಶಾಂತಿ ಧರಿವಾಲ್ ಅವರ ಅತ್ಯಾಚಾರ ಹೇಳಿಕೆ ಇದೀಗ ಭಾರೀ ವಿವಾದವನ್ನು ಸೃಷ್ಟಿಸಿದ್ದು, ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ, ವಕ್ತಾರ ಶೆಹಜಾದ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‍ಸಿಡಬ್ಲೂ) ಅಧ್ಯಕ್ಷೆ ರೇಖಾ ಶರ್ಮಾ ಖಂಡಿಸಿದ್ದಾರೆ.
Advertisement
Rajasthan Government has Ministers like these that’s why women of the State are suffering gruesome gender crimes and police is just don’t do anything. How will women of the state feel safe if it has Ministers like these? @NCWIndia is taking strong action against Mr. Dhariwal. https://t.co/AYAnJJyQ0K
— Rekha Sharma (@sharmarekha) March 9, 2022
Advertisement
ರಾಜಸ್ಥಾನ ಅಸೆಂಬ್ಲಿಯಲ್ಲಿ ಮಾತನಾಡಿದ ಶಾಂತಿ ಧರಿವಾಲ್ ಅವರ ಈ ವೀಡಿಯೋವನ್ನು ಶೆಹಜಾದ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಜೊತೆಗೆ ಆಘಾತಕಾರಿ, ಅಸಹ್ಯಕರ, ಆದರೆ ಆಶ್ಚರ್ಯಕರವಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಶಾಂತಿ ಧರಿವಾಲ್ ಅತ್ಯಾಚಾರವನ್ನು ಕಾನೂನುಬದ್ಧಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಸುದ್ದಿಯಾಗಿದ್ದ ಹತ್ರಾಸ್, ಲಖೀಂಪುರದಲ್ಲಿ ಬಿಜೆಪಿಗೆ ಮುನ್ನಡೆ
Advertisement
ಮತ್ತೊಂದೆಡೆ ಈ ಕುರಿತಂತೆ ಸತೀಶ್ ಪೂನಿಯಾ ಅವರು ಟ್ವೀಟ್ ಮಾಡಿದ್ದು, ಅತ್ಯಾಚಾರದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಪುರುಷರ ಹೆಸರಿನಲ್ಲಿ ಮಹಿಳೆಯರನ್ನು ಅವಮಾನಿಸುತ್ತಿದೆ ಎಂಬ ನಿರ್ಲಜ್ಜ ತಪ್ಪೊಪ್ಪಿಗೆ ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ ಮಾತ್ರವಲ್ಲ, ಪುರುಷರ ಘನತೆಗೆ ಕುಂದು ತಂದಿದೆ. ಪ್ರಿಯಾಂಕಾ ಗಾಂಧಿ ಅವರೇ ಈಗ ಏನು ಹೇಳುತ್ತೀರಾ? ಮತ್ತು ನೀವು ಏನು ಮಾಡುತ್ತೀರಾ ಎಂದು ಕಿಡಿಕಾರಿದ್ದಾರೆ.
ಮಹಿಳಾ ಆಯೋಗದ (ಎನ್‍ಸಿಡಬ್ಲೂ) ಅಧ್ಯಕ್ಷೆ ರೇಖಾ ಶರ್ಮಾ ಅವರು, ರಾಜಸ್ಥಾನ ಸರ್ಕಾರವು ಈ ರೀತಿಯ ಮಂತ್ರಿಗಳನ್ನು ಹೊಂದಿದೆ. ಅದಕ್ಕಾಗಿಯೇ ರಾಜ್ಯದ ಮಹಿಳೆಯರು ಲಿಂಗ ಅಪರಾಧಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಪೊಲೀಸರು ಏನನ್ನೂ ಮಾಡುತ್ತಿಲ್ಲ. ಈ ರೀತಿಯ ಮಂತ್ರಿಗಳನ್ನು ಇರುವ ರಾಜ್ಯದ ಮಹಿಳೆಯರು ಹೇಗೆ ಸುರಕ್ಷಿತವಾಗಿರುತ್ತಾರೆ? ಎನ್‍ಸಿಡಬ್ಲ್ಯೂ ಇಂಡಿಯಾ ಶಾಂತಿ ಧರಿವಾಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.