ಜೈಪುರ: ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಟಿಕೆಟ್‍ನ್ನು ವಿತರಿಸಿದ ರೀತಿಯಲ್ಲೇ ಕೇಂದ್ರ ಸರ್ಕಾರ ಇಂಧನಕ್ಕೂ ಕೂಪನ್ ನೀಡಬೇಕು ಎಂದು ರಾಜಸ್ಥಾನ ಸಚಿವ ಪ್ರತಾಪ್ ಖಚರಿಯಾವಾಸ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆ ಲೀಟರ್‌ಗೆ ಸುಮಾರು 5 ರೂ.ಗಳಷ್ಟು ಏರಿಕೆಯಾಗುತ್ತಿದೆ. ಚುನಾವಣೆಯ ನಂತರ ಬಿಜೆಪಿ ಪೆಟ್ರೋಲ್ ಹಾಗೂ ಡೀಸೆಲ್ ಏರಿಕೆ ಮಾಡಿದೆ ಎಂದು ಕಿಡಿಕಾರಿದರು.
Advertisement
Advertisement
ಪಂಚರಾಜ್ಯಗಳ ಚುನಾವಣೆ ನಡೆಯುವಾಗ ಇಂಧನ ಬೆಲೆ ಏರಿಕೆ ಆಗಿರಲಿಲ್ಲ. ಆದರೆ ಕಳೆದ ಮಂಗಳವಾರದಿಂದ ಏಳು ಬಾರಿ ಏರಿಕೆ ಮಾಡಿದ್ದಾರೆ ಇದರಿಂದಲೇ ಗೋತತಾಗುತ್ತದೆ ಬಿಜೆಪಿ ಅವರು ರಾಮಭಕ್ತರು ಅಲ್ಲ, ರಾವಣ ಭಕ್ತರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸತತ 7ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ
Advertisement
Advertisement
ಮಂಗಳವಾರ ಪೆಟ್ರೋಲ್, ಡೀಸೆಲ್ ದರ ಸತತ 7ನೇ ದಿನವೂ ಏರಿಕೆಯಾಗಿದ್ದು, ಮಂಗಳವಾರವೂ ಪ್ರತಿ ಲೀಟರ್ ಪೆಟ್ರೋಲ್‍ಗೆ 80 ಪೈಸೆ, ಡೀಸೆಲ್ 70 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 4.80ರೂ. ಏರಿಕೆಯಾಗಿದೆ. ಇದನ್ನೂ ಓದಿ: ಧರ್ಮ ಯುದ್ಧ ಅಂತ್ಯಕ್ಕೆ ಬುದ್ಧಿಜೀವಿಗಳ ಮನವಿ- 61 ಸಾಹಿತಿಗಳಿಂದ ಸಿಎಂಗೆ ಪತ್ರ