ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಸತತ 7ನೇ ದಿನವೂ ಏರಿಕೆಯಾಗಿದ್ದು, ಮಂಗಳವಾರವೂ ಪ್ರತಿ ಲೀಟರ್ ಪೆಟ್ರೋಲ್ಗೆ 80 ಪೈಸೆ, ಡೀಸೆಲ್ 70 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ 4.80ರೂ. ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 104.76 ರೂ. ಇದ್ದ ಪೆಟ್ರೋಲ್ ದರ 105.62 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್ಗೆ 89 ರೂ. ಇದ್ದ ಡೀಸೆಲ್ ದರ ರೂ. 89.70ಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ರೂ. 100.21 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.91.47 ದಾಖಲಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 85 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 75 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀ. ಪೆಟ್ರೋಲ್ ದರ ರೂ. 115.04, ಡೀಸೆಲ್ ರೂ.99.25 ದಾಖಲಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 105.94 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96 ರೂಪಾಯಿ ಇದೆ. ಹೈದರಾಬಾದ್ನಲ್ಲಿ ಲೀಟರ್ಗೆ ಪೆಟ್ರೋಲ್ ಬೆಲೆ 113.61ರೂ ಹಾಗೂ ಡೀಸೆಲ್ಗೆ 99.84ರೂ. ದಾಖಲಾಗಿದೆ. ಇದನ್ನೂ ಓದಿ: ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇದನ್ನೂ ಓದಿ: ಒಂದೇ ವಾರದಲ್ಲಿ ಸತತ ನಾಲ್ಕನೇ ದಿನವು ಏರಿಕೆ ಕಂಡ ಪೆಟ್ರೋಲ್, ಡಿಸೇಲ್ ಬೆಲೆ