ಜೈಪುರ: ರಾಜಸ್ಥಾನದ ಬಿಜೆಪಿ (BJP) ನಾಯಕ ಹಾಗೂ ಬುಡಕಟ್ಟು ಪ್ರದೇಶಾಭಿವೃದ್ಧಿ ಸಚಿವ ಬಾಬುಲಾಲ್ ಖಾರಾಡಿ (Babulal Kharadi) ಹೇಳಿಕೆಯೊಂದನ್ನು ನೀಡಿ ಇದೀಗ ವಿವಾದಕ್ಕೀಡಾಗಿದ್ದಾರೆ.
Advertisement
ಉದಯಪುರದ ನಯ್ ಗ್ರಾಮದಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯಾರೂ ಹಸಿವಿನಿಂದ ಮಲಗಬಾರದು ಹಾಗೂ ಉಳಿದುಕೊಳ್ಳಲು ಸೂರು ಇಲ್ಲದೆ ಇರಬಾರದು ಎಂಬುದು ಪ್ರಧಾನಿಯವರ ಕನಸಾಗಿದೆ ಎಂದರು. ಇದನ್ನೂ ಓದಿ: ಮಂಡ್ಯದಿಂದ ಹೆಚ್‌ಡಿಕೆ ಸ್ಪರ್ಧೆ – ಕಾರ್ಯಕರ್ತರು, ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ: ನಿಖಿಲ್ ಕುಮಾರಸ್ವಾಮಿ
Advertisement
ಬಳಿಕ ನೀವು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಿ. ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಿಮಗೆ ಮನೆ ಕಟ್ಟಿಸಿಕೊಡ್ತಾರೆ. ಆಹಾರ ಧಾನ್ಯಗಳನ್ನು ಪೂರೈಸುವ ವ್ಯವಸ್ಥೆ ಕೂಡ ಮಾಡುತ್ತಾರೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಬಿಡಿ. ಅಲ್ಲದೆ ಅಧಿಕ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಪೂರೈಸುತ್ತಾರೆ ಎಂದು ಹೇಳಿದ್ದಾರೆ.
Advertisement
Advertisement
ಕೇಂದ್ರ ಸರ್ಕಾರವು ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಿದೆ ಮತ್ತು ರಾಜಸ್ಥಾನದ ಬಿಜೆಪಿ ನೇತೃತ್ವದ ಸರ್ಕಾರವು ಉಜ್ವಲ ಯೋಜನೆಯಡಿ 450 ರೂ. ಗಳಿಗೆ ಸಿಲಿಂಡರ್‌ಗಳನ್ನು ಲಭ್ಯವಾಗುವಂತೆ ಮಾಡಲು ಯೋಜಿಸುತ್ತಿದೆ ಎಂದು ಪ್ರಸ್ತಾಪಿಸಿದರು. ಕೇಸರಿ ಪಕ್ಷವು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದ ಅವರು, ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ಸೇರಿದಂತೆ ಅನೇಕ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಖಾರಾಡಿ ಅವರು ಹೀಗೆ ಹೇಳಿಕೆ ನೀಡುತ್ತಿದ್ದಂತೆಯೇ ಸಭೆಯಲ್ಲಿದ್ದ ಅನೇಕರು ಮುಸಿ ಮುಸಿ ನಕ್ಕರು. ಜೊತೆಗೆ ಪಕ್ಷದ ನಾಯಕರು ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಮುಜುಗರದಿಂದ ತಲೆ ತಗ್ಗಿಸಿದರು.