ಗರ್ಭಿಣಿಗೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ – ರಾಜಸ್ಥಾನದಲ್ಲಿ ಮಹಿಳೆಯರ ಸುರಕ್ಷತೆ ನಿರ್ಲಕ್ಷ್ಯ ಎಂದು ನಡ್ಡಾ ಟೀಕೆ

Public TV
3 Min Read
JP Nadda

ಜೈಪುರ: ರಾಜಸ್ಥಾನದ (Rajasthan) ಪ್ರತಾಪ್‌ಗಡ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಗರ್ಭಿಣಿಯ ಮೇಲೆ ಆಕೆಯ ಪತಿಯೇ ಹಲ್ಲೆ ನಡೆಸಿ, ಹಳ್ಳಿಯ ಉದ್ದಗಲಕ್ಕೂ ಬೆತ್ತಲೆ ಮೆರವಣಿಗೆ (Women Naked Parades) ನಡೆಸಿದ ಅಮಾನವೀಯ ಘಟನೆ ಗುರುವಾರ ನಡೆದಿದೆ. ಘಟನೆಯಿಂದ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗಳು ಶುರುವಾಗಿದ್ದು, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ.

ವಿವಾಹಿತ ಮಹಿಳೆಯು ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಳು ಅವನೊಂದಿಗೆ ವಾಸವಿದ್ದಳು ಅನ್ನೋ ಕಾರಣಕ್ಕೆ ಕೆರಳಿದ್ದ ಪತಿ ಈ ಕೃತ್ಯ ಎಸಗಿದ್ದಾನೆ. ಈ ಘಟನೆಯ ಕ್ರೌರ್ಯದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪತಿಯ ಮನೆಯ ಹೊರಗೆ ತನ್ನ 21 ವರ್ಷದ ಗರ್ಭಿಣಿಯ ಬಟ್ಟೆ ಕಳಚುವುದು ಮತ್ತು ನಗ್ನ ಮೆರವಣಿಗೆ ನಡೆಸುವುದು ವಿಡಿಯೋದಲ್ಲಿ ಕಾಣಿಸಿದೆ. ಆಕೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ, ಯಾರೂ ನೆರವಿಗೆ ಮುಂದಾಗಿಲ್ಲ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮದುವೆಯಾಗಿದ್ದರೂ ಬೇರೊಬ್ಬ ಪುರುಷನ ಜತೆ ವಾಸಿಸುತ್ತಿರುವುದರಿಂದ ಕೋಪಗೊಂಡಿದ್ದ ಗಂಡ ಹಾಗೂ ಆತನ ಮನೆಯವರು ಆಕೆಯನ್ನು ಅಪಹರಿಸಿ, ತಮ್ಮ ಗ್ರಾಮಕ್ಕೆ ಕರೆತಂದಿದ್ದರು. ಅಲ್ಲಿ ಆಕೆಯನ್ನು ಅಮಾನುಷವಾಗಿ ಥಳಿಸಿ, ಬೆತ್ತಲಾಗಿಸಿ, ಮೆರವಣಿಗೆ ಮಾಡಲಾಗಿದೆ ಎಂದು ರಾಜಸ್ಥಾನ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!

ಈ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಸಂತ್ರಸ್ತೆಯ ಗಂಡ ಕನಾ ಮೀನ, ನಾತು ಮೀನ ಹಾಗೂ ವಿಲಿಯಾ ಮೀನ ಎಂಬ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು, ಆರೋಪಿ ಪತಿಯನ್ನ ಬಂಧಿಸಲು 6 ತಂಡಗಳನ್ನು ರಚಿಸಿದ್ದರು. ಮುಖ್ಯ ಆರೋಪಿಯಾದ ಮಹಿಳೆಯ ಗಂಡನನ್ನ ಹಿಡಿಯಲು ಬೆನ್ನಟ್ಟಿದ್ದ ಸಂದರ್ಭದಲ್ಲಿ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕಾಲಿಗೆ ಗುಂಡೇಟು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Rajasthan Police

ಆಗಸ್ಟ್ 31ರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆ ಹಾಗೂ ಕನಾ ಮೀನನಿಗೆ ಕಳೆದ ವರ್ಷ ಮದುವೆಯಾಗಿತ್ತು. ಪಕ್ಕದ ಮನೆಯಾತನ ಜತೆ ಆಕೆ ಪರಾರಿಯಾಗಿದ್ದಳು ಎಂದು ಆರೋಪಿಸಿ ಆಕೆಯ ಪತಿ ಮತ್ತು ಕುಟುಂಬದ ಇತರರು ಹಲ್ಲೆ ನಡೆಸಿದ್ದರು. ಬಳಿಕ ಹಳ್ಳಿಯ ತುಂಬಾ ಬೆತ್ತಲೆ ಮೆರವಣಿಗೆ ನಡೆಸಿದ್ದರು. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದಂತೆ ಪ್ರತಾಪ್‌ಗಡ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಹೋದರಿಯರ ಮೇಲೆ 10 ಜನರಿಂದ ಸಾಮೂಹಿಕ ಅತ್ಯಾಚಾರ- ಆರೋಪಿಗಳು ಅರೆಸ್ಟ್

ಈ ಘಟನೆಯನ್ನ ಸಂಪೂರ್ಣವಾಗಿ ಖಂಡಿಸಿರುವ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸುಸಂಸ್ಕೃತ ಸಮಾಜದಲ್ಲಿ ಇಂತಹ ಅಪರಾಧಿಗಳಿಗೆ ಜಾಗವಿಲ್ಲ. ಆದಷ್ಟು ಬೇಕ ಈ ಆರೋಪಿಗಳನ್ನ ಕಟೆಕಟೆಯಲ್ಲಿ ನಿಲ್ಲಿಸಿ, ತ್ವರಿತ ನ್ಯಾಯಾಲಯದಲ್ಲಿಯೇ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನೂ ರಾಜಸ್ಥಾನ ಸರ್ಕಾರದ ವಿರುದ್ಧ ಕಿಡಿ ಕಾರಿಸುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜಸ್ಥಾನದಲ್ಲಿ ಆಡಳಿತ ಪಕ್ಷ ತಮ್ಮ ಪಕ್ಷದ ಒಳಜಗಳಗಳನ್ನ ಪರಿಹರಿಸುವಲ್ಲಿ ನಿರತವಾಗಿದೆ. ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಬಣ ಜಗಳಗಳನ್ನ ಇತ್ಯರ್ಥಗೊಳಿಸುವಲ್ಲಿ ನಿರತರಾಗಿದ್ದಾರೆ. ಉಳಿದ ಸಮಯದಲ್ಲಿ ದೆಹಲಿಗೆ ಬಂದು ರಾಜವಂಶಸ್ಥರನ್ನು ಸಮಾಧಾನಪಡಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Web Stories

Share This Article