ಜೈಪುರ: ಭರ್ಜರಿಯಾಗಿ ವಿವಾಹವಾಗುವುದು ಇಂದಿನ ವಧು, ವರರ ಕನಸಾಗಿರುತ್ತದೆ. ವಿವಾಹದ ನಂತರ ವಧುವನ್ನು ವರನ ಮನೆಗೆ ಕರೆದುಕೊಂಡು ಹೋಗುವುದು ಸಂಪ್ರದಾಯ. ಬಸ್, ಕಾರು ಹೀಗೆ ಅವರ ಅನೂಕೂಲಕ್ಕೆ ತಕ್ಕಂತೆ ವಧುವನ್ನು ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ಮಾವ ತನ್ನ ಸೊಸೆಯನ್ನು ಹೆಲಿಕಾಪ್ಟರ್ನಲ್ಲಿ ಕರೆದುಕೊಂಡು ಬಂದಿದ್ದಾರೆ.
Advertisement
ರಾಜಸ್ತಾನದ ಕರೌಲಿ ಜಿಲ್ಲೆಯ ಕ್ಯಾಮ್ರಿ ಗ್ರಾಮದ ನಿವಾಸಿ ವಿಜೇಂದರ್ ಸೈನಿ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಹೆಲಿಕಪ್ಟರ್ನಲ್ಲಿ ಬಂದಿದ್ದಾರೆ. ಮದುವೆಯಾದ ನಂತರ ವರ ವಜೇಂದರ್ ಸೈನಿ ಹೆಲಿಕಾಪ್ಟರ್ನಲ್ಲಿ ವಧುವನ್ನು ಕರೆದುಕೊಂಡು ಭರತ್ಪುರ ಗ್ರಾಮಕ್ಕೆ ಬಂದಿಳಿದಿದ್ದಾರೆ. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ
Advertisement
ವಿಜೇಂದರ್, ಖುಷ್ಬೂಅವರನ್ನು ವಿವಾಹವಾಗಿದ್ದಾರೆ. ವಿಜೇಂದರ್ ಅವರ ತಂದೆ ರಾಧೇಶ್ಯಾಮ್ ಸೈನಿ ಅವರು ಒಂದು ದಿನ ತಮ್ಮ ಕುಟುಂಬದ ಮಗುನೊಂದಿಗೆ ಆಟವಾಡುತ್ತಿದ್ದಾಗ ಮಗುವಿನ ಬಳಿ ಒಂದು ಚಿಕ್ಕ ಆಟಿಕೆಯ ಹೆಲಿಕಾಪ್ಟರ್ ಇತ್ತು. ಅಲ್ಲಿಯ ಗ್ರಾಮಸ್ಥರೊಬ್ಬರು ರಾಧೇಶ್ಯಾಮ್ ಅವರುನ್ನು ಗೇಲಿ ಮಾಡಿದ್ದಾರೆ. ನಿನ್ನ ಮಗನ ಮದುವೆಗೆ ಹೆಲಿಕಾಪ್ಟರ್ ತರುವಂತೆ ಹೇಳಿದ್ದಾರೆ. ಈ ಗೇಲಿಯಿಂದಾಗಿ ವಿಜೇಂದರ್ ಅವರ ತಂದೆ ರಾಧೇಶ್ಯಾಮ್ ಸೈನಿ 6.5 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ ಸೊಸೆಯನ್ನು ಕರೆದುಕೊಂಡು ಬಂದಿದ್ದಾರೆ.