ಜೈಪುರ: ಪೈಲಟ್ ಮಿಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದಿಂದ ಬಿಡುಗಡೆಯಾಗಿ ಭಾರತಕ್ಕೆ ಕಾಲಿಟ್ಟ ದಿನದಂದೇ ಹುಟ್ಟಿದ ಮಗುವಿಗೆ ದಂಪತಿ ಅಭಿನಂದನ್ ಹೆಸರನ್ನಿಟ್ಟು ಗೌರವ ಸಲ್ಲಿಸಿದ್ದಾರೆ.
ಅಭಿನಂದನ್ ಅವರ ಬಗ್ಗೆ ದೇಶಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಜಸ್ಥಾನದ ಅಲ್ವಾರ ಜಿಲ್ಲೆಯ ದಂಪತಿ ತಮ್ಮ ಗಂಡು ಮಗುವಿಗೆ ಅಭಿನಂದನ್ ಎಂದು ಹೆಸರಿಡುವ ಮೂಲಕ ಮಿಗ್ ಕಮಾಂಡರ್ ಗೆ ಗೌರವ ಸಲ್ಲಿಸಿದ್ದಾರೆ. ಈ ಕುಟುಂಬವು ಅಲ್ವಾರ್ ಕಿಶನ್‍ಗಢ್ ನಲ್ಲಿ ನೆಲೆಸಿದೆ.
Advertisement
Advertisement
ನನ್ನ ಸೊಸೆ ಶುಕ್ರವಾರ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ವಾಯಸೇನೆಯ ಪೈಲಟ್ ಗೌರವರ್ಥವಾಗಿ ಅಭಿನಂದನ್ ಎಂದು ಹೆಸರಿಟ್ಟಿದ್ದೇವೆ. ನಮ್ಮ ಪೈಲಟ್ ಬಗ್ಗೆ ನಮಗೆ ಹೆಮ್ಮೆ ಇದೆ. ಹೀಗಾಗಿ ಅವರ ಹೆಸರನ್ನು ನಾವು ಮಗುವಿಗೆ ನಾಮಕರಣ ಮಾಡಿದ್ದೇವೆ ಎಂದು ಮಗುವಿನ ಅಜ್ಜ ಜಾನೇಶ್ ಭೂತನಿ ಅವರು ಹೇಳಿದ್ದಾರೆ.
Advertisement
ಮಿಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಸಂದರ್ಭದಲ್ಲಿ ನಡೆಯುತ್ತಿದ್ದ ಬೆಳವಣಿಗೆಯ ಬಗ್ಗೆ ನನ್ನ ಸೊಸೆ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಟಿವಿ ನೋಡುತ್ತಿದ್ದೆವು. ಈ ವೇಳೆ ನನ್ನ ಸೊಸೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೆವು. ನನ್ನ ಸೊಸೆ ಅಂದಿನ ದಿನವೇ ಗಂಡು ಮಗುವಿಗೆ ಜನ್ಮ ನೀಡಿದ್ದರು ಎಂದು ಜಾನೇಶ್ ತಿಳಿಸಿದ್ದಾರೆ.
Advertisement
ನನ್ನ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡುವ ಮೂಲಕ ನಾವು ಭಾರತೀಯ ಪೈಲಟ್ ನ ಶೌರ್ಯವನ್ನು ಸದಾ ನೆನಪಿಸಿಕೊಳ್ಳುತ್ತೇವೆ. ಜೊತೆಗೆ ಮುಂದೆ ನನ್ನ ಮಗನೂ ಒಬ್ಬ ವೀರ ಯೋಧನಾಗಲಿ ಎಂದು ನಾನು ಬಯಸುತ್ತೇನೆ ಎಂದು ತಾಯಿ ಸಪ್ನಾ ದೇವಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv