ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ’ವೆಟ್ಟೈಯಾನ್’ (Vettaiyan) ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ತಲೈವಾ ನಟಿಸಿರುವ ಈ ಚಿತ್ರ ಅಕ್ಟೋಬರ್ 10ಕ್ಕೆ ಚಿತ್ರಮಂದಿರದಲ್ಲಿ ಅಬ್ಬರಿಸಲಿದೆ. ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಕೆಲಸದ ನಡುವೆ ಶಿವಣ್ಣರನ್ನು ಭೇಟಿಯಾದ ಯಶ್
Target locked ???? VETTAIYAN ????️ is set to hunt in cinemas worldwide from OCTOBER 10th, 2024! ????️ Superstar ???? as Supercop! ????
Releasing in Tamil, Telugu, Hindi & Kannada!#Vettaiyan ????️ @rajinikanth @SrBachchan @tjgnan @anirudhofficial @LycaProductions #Subaskaran @gkmtamilkumaran… pic.twitter.com/WJi2ZvpX8Z
— Lyca Productions (@LycaProductions) August 19, 2024
ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ‘ವೆಟ್ಟೈಯಾನ್’ ಸಿನಿಮಾ ಮೂಲಕ ರಜನಿಕಾಂತ್ ಬರುತ್ತಿದ್ದಾರೆ. ಡಿಫರೆಂಟ್ ಗೆಟಪ್‌ನಲ್ಲಿ ಬರುತ್ತಿರುವ ತಲೈವಾಗೆ ಬಿಗ್ ಬಿ ಕೂಡ ಸಾಥ್ ನೀಡಿದ್ದಾರೆ. ಈ ಚಿತ್ರಕ್ಕೆ `ಜೈ ಭೀಮ್’ ಖ್ಯಾತಿಯ ಟಿ.ಜೆ ಜ್ಞಾನವೇಲ್ ನಿರ್ದೇಶನ ಮಾಡಿದ್ದಾರೆ.
ಲೈಕಾ ಸಂಸ್ಥೆ ನಿರ್ಮಾಣದ ಈ ಸಿನಿಮಾದಲ್ಲಿ ರಜನಿಕಾಂತ್, ಅಮಿತಾಭ್ ಜೊತೆ ರಿತಿಕಾ ಸಿಂಗ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕನ್ನಡ, ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ‘ವೆಟ್ಟೈಯಾನ್’ ಚಿತ್ರ ಮೂಡಿ ಬಂದಿದೆ.