ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut)ಬಹುದೊಡ್ಡ ಜವಾಬ್ದಾರಿ ತಗೆದುಕೊಂಡು ‘ಎಮರ್ಜೆನ್ಸಿ’ (Emergency) ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ಹಣ ಹಾಕಿದ್ದಲ್ಲದೇ, ನಿರ್ದೇಶಕಿಯಾಗಿ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ. ಇದು ಇಂದಿರಾ ಗಾಂಧಿ (Indira Gandhi) ಅವರ ಎಮರ್ಜೆನ್ಸಿ ಕುರಿತಾದ ಸಿನಿಮಾವಾಗಿದ್ದು, ಇಂದಿರಾ ಗಾಂಧಿಯ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಹುತೇಕ ಕೆಲಸಗಳು ಕೂಡ ಮುಗಿದಿವೆ.
ಸಿನಿಮಾದ ಶೂಟಿಂಗ್, ಎಡಿಟಿಂಗ್, ಹಿನ್ನೆಲೆ ಸಂಗೀತ ಹೀಗೆ ಎಲ್ಲ ಕೆಲಸವನ್ನೂ ಮುಗಿಸಿರುವ ಕಂಗನಾ, ಸಿನಿಮಾ ಹೇಗೆ ಬಂದಿದೆ ಎಂದು ಸಲಹೆ ಪಡೆಯುವುದಕ್ಕಾಗಿ ಹಲವರಿಗೆ ಚಿತ್ರವನ್ನು ತೋರಿಸಿದ್ದಾರೆ. ಚಿತ್ರ ನೋಡಿದವರ ಪೈಕಿ ರಾಜಮೌಳಿ ಅವರ ತಂದೆ, ವಿಜಯೇಂದ್ರ ಪ್ರಸಾದ್ ಕೂಡ ಒಬ್ಬರು. ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಕಥೆಗಾರರೂ ಆಗಿರುವ ವಿಜಯೇಂದ್ರ ಪ್ರಸಾದ್ (Vijayendra Prasad) ಎಮರ್ಜಿನ್ಸಿ ಸಿನಿಮಾ ನೋಡಿ ಭಾವುಕರಾದರಂತೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಂಗನಾ, ‘ಎಮರ್ಜೆನ್ಸಿ ಸಿನಿಮಾವನ್ನು ವಿಜಯೇಂದ್ರ ಪ್ರಸಾದ್ ಅವರು ನೋಡುತ್ತಿರುವಾಗ ನಾನು ಅವರನ್ನೇ ಗಮನಿಸುತ್ತಿದ್ದೆ. ಹಲವು ಕಡೆ ಅವರು ಭಾವುಕರಾಗಿದ್ದರು. ಕಣ್ಣುಗಳು ನೀರು ತುಂಬಿಕೊಂಡಿದ್ದವು’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ
ಈ ನಡುವೆ ಎಮರ್ಜೆನ್ಸಿ ಕುರಿತಾಗಿ ಸಿನಿಮಾ ಮಾಡುತ್ತಿದ್ದರು, ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಅದರಲ್ಲೂ ಸಮಾಜಕ್ಕೆ ತಪ್ಪು ಸಂದೇಶಗಳನ್ನು ಕೊಡುವ ಸಿನಿಮಾಗಳಿದ್ದರೆ, ಮೊದಲು ಅದರಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ಕಂಗನಾ ಪಾತ್ರವು ಇಂದಿರಾ ಗಾಂಧಿ ಅವರನ್ನು ಅವಮಾನಿಸುವಂತ ರೀತಿಯಲ್ಲಿ ಇದೆ ಎಂದು ಆರೋಪಿಸಿ, ಟೀಸರ್ ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಕೂಡಲೇ ಈ ಸಿನಿಮಾವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.