ಬೆಂಗಳೂರು: ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಿಂದ ಜಯದೇವ ಹೃದ್ರೋಗ ಘಟಕ ಸ್ಥಳಾಂತರ ವಿಚಾರವಾಗಿ ಮಾಜಿ ಸಚಿವ, ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವೀಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಅವರು, ಜಯದೇವ ಆಸ್ಪತ್ರೆಯ ಘಟಕವನ್ನು ಸರ್ಕಾರದಿಂದ ಸ್ಥಳಾಂತರ ಮಾಡಿದ್ದಲ್ಲ. ಜಯದೇವ ಆಸ್ಪತ್ರೆಯಿಂದ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಗಿಯುವ ಹಂತದಲ್ಲಿದೆ. ಈ ಹಿನ್ನಲೆ ಸ್ಥಳಾಂತರ ಮಾಡಲು ಜಯದೇವ ಆಸ್ಪತ್ರೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. 2011 ನವೆಂಬರ್ 5 ರಂದು ಸದಾನಂದಗೌಡರು ಸಿಎಂ ಆಗಿದ್ದಾಗ ಇಎಸ್‍ಐ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆಯ ಘಟಕ ಪ್ರಾರಂಭ ಮಾಡೋಕೆ ನಿರ್ಧಾರ ಮಾಡಲಾಗಿತ್ತು. 10 ವರ್ಷಗಳ ತನಕ ಅಗ್ರಿಮೆಂಟ್ ಇತ್ತು. ಅದರ ಅವಧಿ ಮುಗಿಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಾಜಿನಗರದ ಇಎಸ್‍ಐ ಹೃದ್ರೋಗ ವಿಭಾಗದ ವೈಫಲ್ಯಕ್ಕೆ ಭ್ರಷ್ಟಾಚಾರ ಕಾರಣ: ಎಎಪಿ
ಇಎಸ್‍ಐ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಇಲ್ಲಿಯೇ ಆಸ್ಪತ್ರೆ ಮುಂದುವರಿಸುವ ಬಗ್ಗೆ ಇಎಸ್‍ಐ ಆಸ್ಪತ್ರೆ ಪತ್ರ ಬರೆದಿದೆ. ಆದರೆ ಜಯದೇವ ಆಸ್ಪತ್ರೆ, ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಮುಂದುವರಿಸಲು ಆಸಕ್ತಿ ತೋರಿಸಿಲ್ಲ. ಜಯದೇವ ಆಸ್ಪತ್ರೆಯಲ್ಲಿಯೇ 100 ಹಾಸಿಗೆಯ ಮೂಲಕ ಹೊಸ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇನ್ಫೋಸಿಸ್ ಕೊಡುಗೆಯ ಮೂಲಕ ಹೈಟೆಕ್ ಟಚ್ ನೀಡಲಾಗುತ್ತಿದೆ. ಹೀಗಾಗಿ ಇಎಸ್‍ಐ ಆಸ್ಪತ್ರೆಯಲ್ಲಿ ಮುಂದುವರಿಸುವ ಆಸಕ್ತಿ ಇಲ್ಲ ಎಂದು ಜಯದೇವ ಆಸ್ಪತ್ರೆ ಹೇಳಿದೆ. ಇದನ್ನೂ ಓದಿ: ಅಂಗಾಂಗಗಳನ್ನು ದಾನ ಮಾಡಿ – ಡೆತ್‍ನೋಟ್ ಬರೆದು ಉಡುಪಿಯ ಬಿಜೆಪಿ ನಾಯಕಿ ಆತ್ಮಹತ್ಯೆ
ಇಎಸ್‍ಐ ಆಸ್ಪತ್ರೆ ರಾಜಾಜಿನಗರ ಆಡಳಿತ ಮಂಡಳಿ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದಾರೆ. ಬೇರೊಂದು ಆಸ್ಪತ್ರೆಯ ಜೊತೆ ಒಪ್ಪಂದ ಮಾಡಿಕೊಳ್ಳುವುದಾ? ಪ್ರತ್ಯೇಕ ಆಸ್ಪತ್ರೆ ಶುರು ಮಾಡುವುದಾ ಎಂಬ ಆಲೋಚನೆಯಲ್ಲಿದೆ. ರಾಜ್ಯ ಸರ್ಕಾರ ಜಯದೇವ ಆಸ್ಪತ್ರೆ ಘಟಕವನ್ನ ಸ್ಥಳಾಂತಾರ ಮಾಡುತ್ತಿಲ್ಲ ಎಂದು ಶಾಸಕ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.