ಮುಂಬೈ: ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಮೇ 3ರೊಳಗೆ ತೆರವುಗೊಳಿಸದೇ ಇದ್ದರೆ ಮಹಾರಾಷ್ಟ್ರದ ನಿಜವಾದ ಶಕ್ತಿಯನ್ನು ತೋರಿಸುತ್ತೇವೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಅಧ್ಯಕ್ಷ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ
Advertisement
ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಮೇ 3ರವರೆಗೂ ಮಾತ್ರ ಗಡುವು ನೀಡಿರುವ ಬಗ್ಗೆ ದೃಢವಾಗಿರುವುದಾಗಿ ರಾಜ್ ಠಾಕ್ರೆ ಅವರು ಹೇಳಿದ್ದಾರೆ. ಭಾನುವಾರ ಸಂಜೆ ನಡೆಸಿದ ರ್ಯಾಲಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಮೇ 3ರವರೆಗೂ ನೀಡಿರುವ ಗಡುವಿನ ನಂತರ ಏನಾಗುತ್ತದೆ ಎಂಬುದಕ್ಕೆ ನಾನು ಜವಾಬ್ದಾರನಾಗಿರುವುದಿಲ್ಲ. ಮೇ 4ರಿಂದ ಎಲ್ಲಾ ಹಿಂದೂಗಳು ಮಸೀದಿಗಳ ಮುಂದೆ ಇರುವ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ. ಇದನ್ನು ಮುಸ್ಲಿಮರು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದೇ ಇದ್ದರೆ, ನಾವು ಅವರಿಗೆ ಮಹಾರಾಷ್ಟ್ರದ ಶಕ್ತಿಯನ್ನು ತೋರಿಸುತ್ತೇವೆ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ಧ್ವನಿವರ್ಧಕ ಶಬ್ದವು ಧಾರ್ಮಿಕ ವಿಚಾರದಲ್ಲ, ಆದರೆ ಸಾಮಾಜಿಕ ವಿಚಾರವಾಗಿದೆ. ಎಲ್ಲಾ ಧ್ವನಿವರ್ಧಕಗಳು ಮಸೀದಿಗಳ ಮೇಲೆ ಬಳಸವುದು ಕಾನೂನುಬಾಹಿರ. ಅಷ್ಟೊಂದು ಧ್ವನಿವರ್ಧಕಗಳನ್ನು ಬಳಸಲು ಅದೇನೂ ಸಂಗೀತ ಕಚೇರಿಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಂಪೈರ್ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು
Advertisement
ಉತ್ತರ ಪ್ರದೇಶ ಸರ್ಕಾರವು ಧ್ವನಿವರ್ಧಕಗಳನ್ನು ತೆಗೆದುಹಾಕುತ್ತಿದೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಧ್ವನಿವರ್ಧಕಗಳನ್ನು ತೆಗೆದುಹಾಕಬೇಡಿ ಎಂದು ತಡೆದಿರುವವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!