ಮುಂಬೈ: ಎಂಎನ್‍ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಮಂಗಳವಾರ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ಸೊಂಟದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ರಾಜ್ ಠಾಕ್ರೆ ಅವರು ಮೊಣಕಾಲು ಮತ್ತು ಬೆನ್ನಿನ ಸಮಸ್ಯೆಗಳಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ನಾಳೆ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ
ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಇತ್ತೀಚೆಗೆ ಗಡುವು ನೀಡಿದ ನಂತರ ರಾಜ್ ಠಾಕ್ರೆ ಸುದ್ದಿಯಲ್ಲಿದ್ದರು. ಮಸೀದಿ ಧ್ವನಿವರ್ಧಕಗಳ ವಿಚಾರದಲ್ಲಿ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಎಚ್ಚರಿಕೆ ನೀಡಿದ್ದರು.
ರಾಜ್ ಠಾಕ್ರೆ ಜೂನ್ 5ರಂದು ಅಯೋಧ್ಯೆಗೆ ಹೋಗಬೇಕಾಗಿತ್ತು. ಆದರೆ ಅವರು ಅನಾರೋಗ್ಯದ ಸಮಸ್ಯೆಯಿಂದಾಗಿ ಈ ಪ್ರವಾಸವನ್ನು ಸದ್ಯಕ್ಕೆ ಮುಂದೂಡಿದ್ದಾರೆ. ಇದನ್ನೂ ಓದಿ: ಸೂಲಿಬೆಲೆಯನ್ನು ಸಾಹಿತಿ ಅನ್ನೋದ್ರಲ್ಲಿ ತಪ್ಪಿಲ್ಲ – ಜಗದೀಶ್ ಶೆಟ್ಟರ್