ಮುಂಬೈ: ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಕಳೆದ ವರ್ಷ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಕುಂದ್ರಾ, ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ಇದೀಗ ಅವರ ಖಾತೆ ಹೊಸ ನೋಟ ಪಡೆದುಕೊಂಡಿದೆ.
ರಾಜ್ ಕುಂದ್ರಾ ತಮ್ಮ ಖಾಸಗಿ ಇನ್ಸ್ಟಾಗ್ರಾಮ್ ಖಾತೆಯನ್ನು ತಮ್ಮ ಬ್ಯುಸಿನೆಸ್ ಗಾಗಿ ಬಳಕೆ ಮಾಡಲಿದ್ದಾರೆ ಎಂಬುದು ತಿಳಿದುಬಂದಿದೆ. ತಮ್ಮ ಇನ್ಸ್ಟಗ್ರಾಮ್ ಪ್ರೊಫೈಲ್ ಅನ್ನು ಹೊಸದಾಗಿ ಬಿಂಗ್ಬೈಬಾಸ್ಟಿಯನ್ ಎಂದು ಮರು ನಾಮಕರಣಗೊಳಿಸಿದ್ದಾರೆ. ಇದರ ಪ್ರಕಾರ ಕುಂದ್ರಾ ಶೀಘ್ರವೇ ಹೊಸ ಉಪಹಾರ ಗೃಹವೊಂದನ್ನು ತೆರೆಯಲಿದ್ದಾರೆ. ಇದನ್ನೂ ಓದಿ: ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ ಎಂದಿದ್ದ ನಟಿ ಕ್ಷಮೆ
View this post on Instagram
ಕುಂದ್ರಾ ತಮ್ಮ ಪ್ರೊಫೈಲ್ನಲ್ಲಿ ಮಾಡರ್ನ್ ಅಮೆರಿಕನ್ ಆಂಡ್ ಸೌತ್ ಅಮೆರಿಕನ್ ಬಾರ್ ಆಂಡ್ ಬಿಸ್ಟ್ರೋ ಬೈ ಬಾಸ್ಟಿನ್ ಮುಂಬೈ – ಕಮಿಂಗ್ ಸೂನ್ ಎಂದು ಬರೆದಿದ್ದಾರೆ. ಇದರ ಪ್ರಕಾರ ಮುಂಬೈನ ಖಾರ್ ವೆಸ್ಟ್ ಬಳಿಯಲ್ಲಿ ಶೀಘ್ರವೇ ಹೊಸದಾಗಿ ಉಪಹಾರ ಗೃಹ ತೆರೆಯಲಿದ್ದಾರೆ ಎಂಬುದು ಇದರ ಮೂಲಕ ಖಚಿತವಾಗಿದೆ. ಇದನ್ನೂ ಓದಿ: ಬೆಂಗಾಲಿ ಸಂಪ್ರದಾಯ ಮದುವೆಯ ಫೋಟೋ ಶೇರ್ ಮಾಡಿದ ಮೌನಿ ರಾಯ್
ಕಳೆದ ವರ್ಷ ಅಶ್ಲೀಲ ಚಿತ್ರಗಳ ಹಂಚಿಕೆಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಹೊರ ಬಂದಿದ್ದ ರಾಜ್ ಕುಂದ್ರಾ ಬಳಿಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ತಮ್ಮ ಹಳೆಯ ಪೋಸ್ಟ್ಗಳನ್ನು ಅಳಿಸಿದ ಬಳಿಕ ಇದೀಗ ಅವರ ಪ್ರೊಫೈಲ್ ಹೊಸ ನೋಟ ಪಡೆದುಕೊಂಡಿದೆ.