ಮುಂಬೈ: ಉದ್ಯಮಿ ರಾಜ್ ಕುಂದ್ರಾ 38.5 ಕೋಟಿ ಮೌಲ್ಯದ 5 ಫ್ಲಾಟ್ಗಳನ್ನು ತಮ್ಮ ಪತ್ನಿ ಶಿಲ್ಪಾ ಶೆಟ್ಟಿ ಹೆಸರಿಗೆ ವರ್ಗಾಯಿಸಿದ್ದಾರೆ.
ಕಳೆದ ವರ್ಷ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಮಾಡಿದ ಆರೋಪದ ಮೇಲೆ ಬಂಧಿಯಾಗಿದ್ದರು. ಈ ಸಂದರ್ಭದಲ್ಲಿ ನಟಿ ಶಿಲ್ಪಾ ಶೆಟ್ಟಿ ತನ್ನ ಕಷ್ಟ ಕಾಲದಲ್ಲಿ ಗೌಪ್ಯತೆಯನ್ನು ಗೌರವಿಸುವಂತೆ ಜನರಲ್ಲಿ ಕೇಳಿಕೊಂಡಿದ್ದರು. ಇದೀಗ 6 ತಿಂಗಳುಗಳ ಬಳಿಕ ರಾಜ್ ಕುಂದ್ರಾ ತಮ್ಮ 38.5 ಕೋಟಿ ಮೌಲ್ಯದ ಆಸ್ತಿಯನ್ನು ಪತ್ನಿ ಹೆಸರಿಗೆ ವರ್ಗಾಯಿಸಿದ್ದಾರೆ. ಇದನ್ನೂ ಓದಿ: ನಾನು ರಾಖಿಯನ್ನು ಈ ಕಾರಣಕ್ಕೆ ಇಷ್ಟಪಡುತ್ತೇನೆ- ಹಾಡಿ ಹೊಗಳಿದ ರಾಜ್ ಕುಂದ್ರಾ
Advertisement
Advertisement
Squarefeatindia.com (ಸ್ಕ್ವಾರ್ಫೀಟ್ ಡಾಟ್ ಕಾಂ)ನ ನೋಂದಣಿ ದಾಖಲೆಗಳ ಪ್ರಕಾರ ಉದ್ಯಮಿ ರಾಜ್ ಕುಂದ್ರಾ ತಮ್ಮ ಪತ್ನಿಯ ಹೆಸರಿಗೆ 38.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬರೆದಿರುವುದಾಗಿ ಉಲ್ಲೇಖವಾಗಿದೆ. ಜುಹುನಲ್ಲಿರುವ ಓಷನ್ ವ್ಯೂ ಹೆಸರಿನ ಕಟ್ಟಡದಲ್ಲಿನ ಒಟ್ಟು 5 ಫ್ಲಾಟ್ಗಳನ್ನು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು Squarefeatindia.com ನ ಸಂಸ್ಥಾಪಕ ವರುಣ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ
Advertisement
ಸದ್ಯ ಹಲವು ಸಿನಿಮಾ ಹಾಗೂ ರಿಯಾಲಿಟಿ ಶೋ ಗಳಲ್ಲಿ ಬ್ಯೂಸಿಯಾಗಿರುವ ಶಿಲ್ಪಾ ಹೊಸದಾಗಿ 38.5 ಕೋಟಿ ಮೌಲ್ಯದ ಆಸ್ತಿಗೆ ಒಡತಿಯಾಗಿದ್ದಾರೆ.