ಬೆಂಗಳೂರು: ರಾಜಭವನ ಬಿಜೆಪಿ (BJP) ಕಚೇರಿಯಾಗಿದೆ. ರಾಜ್ಯಪಾಲರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹಮದ್ (Saleem Ahmed) ಕಿಡಿಕಾರಿದ್ದಾರೆ.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಕ್ಷಮೆ ಕೋರಿದ ಅರವಿಂದ್ ಬೆಲ್ಲದ್
Advertisement
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾರೋ ಒಬ್ಬ ಸಂಶಯಾಸ್ಪದ ಗುಣ ಇರುವ ವ್ಯಕ್ತಿ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ. ರಾಜ್ಯಪಾಲರು ಆ ಪತ್ರದ ಆಧಾರದಲ್ಲಿ 12 ಗಂಟೆಯೊಳಗೆ ಸಿಎಂ (CM) ವಿರುದ್ದ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೊಡುತ್ತಾರೆ. ಇದು ರಾಜ್ಯಪಾಲರ ದುರಂತದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ರಾಜ್ಯಪಾಲರ ಬಳಿ ದೂರು ಬಂದ ಕೂಡಲೇ ಮುಖ್ಯ ಕಾರ್ಯದರ್ಶಿಗಳಿಗೆ ವಿವರಣೆ ಕೇಳಿ ಕಳಿಸಿಕೊಡುತ್ತಾರೆ. ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದಾರೆ. ರಾಜ್ಯಪಾಲರು (Governer) ಪಕ್ಷಪಾತ ಮಾಡಬಾರದು. ರಾಜಭವನ ಒಂದು ಪವಿತ್ರವಾದ ಜಾಗ. ಅಲ್ಲಿ ಯಾವುದೇ ರಾಜಕಾರಣ ಮಾಡಬಾರದು. ರಾಜಭವನ ರಾಜಕೀಯ ಮೀರಿ ಇರಬೇಕು. ಆದರೆ ರಾಜಭವನದಲ್ಲಿ ರಾಜಕೀಯ ನಡೆಯುತ್ತಿದೆ. ರಾಜಭವನ ಬಿಜೆಪಿ ಕಚೇರಿ ಆಗಿದೆ ಎಂದು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ