ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿ ನೀರು ಸೋರಿದ್ದರ ಪರಿಣಾಮ ಪ್ರಯಾಣಿಕರು ಬಸ್‌ನೊಳಗೆ ಛತ್ರಿ ಹಿಡಿದು ಪ್ರಯಾಣಿಸಿರುವ ಘಟನೆ ಮೆಜೆಸ್ಟಿಕ್ ಹಾಗೂ ಬನಶಂಕರಿಯಲ್ಲಿ ವರದಿಯಾಗಿದೆ.
ಹೌದು, ತಡರಾತ್ರಿಯಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರಯಾಣಿಕರು ಬಸ್‌ಗಳಲ್ಲಿ ಆರಾಮಾಗಿ ಪ್ರಯಾಣಿಸೋಣ ಎಂದು ಯೋಚಿಸಿದ್ದವರಿಗೆ ಬೆಳಗ್ಗೆ ಬಿಎಂಟಿಸಿಯ ವೋಲ್ವೋ ಬಸ್‌ಗಳು ಶಾಕ್ ನೀಡಿವೆ. ಮಳೆಯಿಂದಾಗಿ ಬಸ್‌ನೊಳಗೂ ನೀರು ಸೋರುತ್ತಿದ್ದರಿಂದ ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣಿಸಬೇಕಾಯಿತು.
ಇಂದು ಬೆಳಗ್ಗಿನ ಜಾವ 4.35ರ ಸುಮಾರಿಗೆ ಬನಶಂಕರಿಯಿಂದ ಐಟಿಪಿಎಲ್ ಹಾಗೂ ಮೆಜೆಸ್ಟಿಕ್‍ನಿಂದ ಐಟಿಪಿಎಲ್‍ಗೆ ಹೊರಟಿದ್ದ ಕೆಎ 57 ಎಫ್ 02 ಮತ್ತು ಕೆಎ 01 ಎಫ್ 9111 ವೋಲ್ವೋ ಬಸ್‌ಗಳಲ್ಲಿ ನೀರು ಸೋರಿದ್ದರಿಂದ ಪ್ರಯಾಣಿಕರು ಛತ್ರಿ ಹಿಡಿದುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಈ ಬಗ್ಗೆ ಕಂಡಕ್ಟರ್ ಹಾಗೂ ಡ್ರೈವರ್ ಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಬಸ್‌ಗಳಲ್ಲಿ ಸೀಟ್ ಇದ್ದರೂ ಸಹ, ನೀರು ಸೋರುತ್ತಿದ್ದರಿಂದ ಹೆಚ್ಚಿನ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣ ಬೆಳೆಸಿದರು. ಈ ಬಗ್ಗೆ ಪ್ರಯಾಣಿಕರಾದ ಪ್ರಶಸ್ತಿ ಎಂಬವರು ಟ್ವಿಟ್ಟರ್ ಮೂಲಕ ಸಿಎಂ ಕುಮಾರಸ್ವಾಮಿಯವರಿಗೆ ಬಸ್‌ನ ಫೋಟೋ ತೆಗೆದು ಕಳುಹಿಸಿ ಕೊಟ್ಟಿದ್ದಾರೆ. ಇನ್ನಾದರೂ ಈ ರೀತಿಯಾಗದಂತೆ ಕ್ರಮವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv