ಗಾಂಧಿನಗರ: ಮೂರು ಸಾವಿರ ಕೋಟಿ ರೂ. ಖರ್ಚು ಮಾಡಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಕಟ್ಟಿಸಲಾಗಿರುವ ಏಕತಾ ಪ್ರತಿಮೆಯ ಕಾಂಪ್ಲೆಕ್ಸ್ ಒಂದೇ ಮಳೆಯಲ್ಲಿ ಸೋರಲು ಆರಂಭಿಸಿದೆ.
ಕಳೆದ ವರ್ಷದ ಅಕ್ಟೋಬರ್ ನಲ್ಲಿ ವಡೋದಾರದಲ್ಲಿ 182 ಅಡಿಯ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಈ ಪ್ರತಿಮೆಯ ವೀಕ್ಷಣೆಗಾಗಿ 153 ಮೀಟರ್ ಎತ್ತರದಲ್ಲಿ ವೀಕ್ಷಣಾ ಗ್ಯಾಲರಿಯನ್ನು ಕಟ್ಟಿಸಲಾಗಿತ್ತು. ಆ ವೀಕ್ಷಣಾ ಗ್ಯಾಲರಿಯ ಮೇಲ್ಫಾವಣಿಯಲ್ಲಿ ನೀರು ಸೋರಿಕೆ ಆಗುತ್ತಿದೆ. ಇದನ್ನೂ ಓದಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯ ಯೋಜನೆ ಆರಂಭಗೊಂಡಿದ್ದು ಹೇಗೆ?
Advertisement
Advertisement
ನಾವು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ನೋಡಲು ಹೋಗಿದ್ದೆವು. ಈ ವೇಳೆ ಮಳೆಯಲ್ಲಿ ಪುತ್ಥಳಿ ನೆನೆಯುತ್ತಿರುವುದು ನೋಡಿ ಬೇಸರವಾಯಿತು. ಮಳೆ ಜೋರಾಗಿ ಬರದಿದ್ದರೂ ಮೈನ್ ಹಾಲ್ ಹಾಗೂ ವೀಕ್ಷಣಾ ಗ್ಯಾಲರಿಯಲ್ಲಿ ನೀರು ತುಂಬಿಕೊಂಡಿತ್ತು ಎಂದು ಪ್ರತಿಮೆಯನ್ನು ನೋಡಲು ಹೋಗಿದ್ದ ಪ್ರವಾಸಿಗರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? – ಇಲ್ಲಿದೆ ಪೂರ್ಣ ವಿವರ
Advertisement
The rainwater has been blown by high-velocity winds inside the viewing gallery It’s by design that it has to be kept open for a better view which tourists can enjoy Water accumulation is being promptly tackled by the maintenance team @PMOIndia @CMOGuj @drrajivguptaias
— Statue Of Unity (@souindia) June 29, 2019
Advertisement
ಈ ಬಗ್ಗೆ ಸ್ಟ್ಯಾಚ್ಯೂ ಆಫ್ ಯೂನಿಟಿ ಟ್ವೀಟ್ ಮಾಡಿ, “ಗಾಳಿ ಜೋರಾಗಿ ಬೀಸಿದ್ದ ಕಾರಣ ಮಳೆ ನೀರು ವೀಕ್ಷಣಾ ಗ್ಯಾಲರಿಯೊಳಗೆ ನುಗ್ಗಿದೆ. ವಿನ್ಯಾಸದ ಮೂಲಕ ಪ್ರವಾಸಿಗರು ಆನಂದಿಸಬಹುದಾದ ಉತ್ತಮ ವೀಕ್ಷಣೆಗಾಗಿ ಅದನ್ನು ತೆರೆದಿಡಬೇಕು. ನೀರಿನ ಸಂಗ್ರಹವನ್ನು ನಿರ್ವಹಣಾ ತಂಡವು ತ್ವರಿತವಾಗಿ ನಿಭಾಯಿಸುತ್ತಿದೆ” ಎಂದು ತಿಳಿಸಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ ಅಕ್ಟೋಬರ್ 31ರಂದು ಅನಾವರಣಗೊಂಡಿತು. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಿದೆ. ಈ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ `ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದರು.
Viewing Gallery of ₹3000 crore Statue of Unity
One rain and it gets flooded, water leaking from the roof and front. Such an expensive statue and they couldn’t even design it to prevent this.. pic.twitter.com/V4pUQxNVS2
— Dhruv Rathee (@dhruv_rathee) June 29, 2019