ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರನ ಹುಂಡಿಯಲ್ಲಿ (Hundi) ಭರ್ಜರಿ ಕಾಣಿಕೆ ಸಂಗ್ರಹವಾಗಿದ್ದು, ವಿದೇಶಿ ಕರೆನ್ಸಿಗಳು (Foreign Currency) ಪತ್ತೆಯಾಗಿವೆ.
ರಾಜ್ಯದ ಪ್ರಸಿದ್ಧ ಯಾತ್ರ ಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ನಡೆದ ಹುಂಡಿ ಹಣ ಎಣಿಕೆಯಲ್ಲಿ ಭರ್ಜರಿ ಹಣ ಸಂಗ್ರಹವಾಗಿದೆ. 30 ದಿನಗಳಿಗೆ ಮಲೆ ಮಹದೇಶ್ವರನಿಗೆ ಹಣದ ಮಳೆಯೇ ಸುರಿದಿದೆ. ಕಳೆದ 1 ತಿಂಗಳಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದ್ದು ಈ ವೇಳೆ ವಿದೇಶಿ ಕರೆನ್ಸಿಗಳು ಸಹ ಪತ್ತೆಯಾಗಿವೆ. ಇದನ್ನೂ ಓದಿ: ಯಾದಗಿರಿಯಲ್ಲಿ ಪಡಿತರ ಅಕ್ಕಿಗೆ ಕನ್ನ – 69,000 ರೂ. ಮೌಲ್ಯದ ಅಕ್ಕಿ ವಶ
Advertisement
Advertisement
ಕಳೆದ 30 ದಿನಗಳಲ್ಲಿ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರು ಹುಂಡಿಯಲ್ಲಿ ಹಾಕಿದ ಹಣದ ಎಣಿಕೆ ಮಾಡಿಲಾಯಿತು. ಈ ವೇಳೆ ಬರೋಬ್ಬರಿ 2.16 ಕೋಟಿ ರೂಪಾಯಿ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ರಾತ್ರಿ 7 ಗಂಟೆಯವರೆಗೆ ಹುಂಡಿ ಎಣಿಕೆ ನಡೆಸಲಾಯಿತು. ಇದನ್ನೂ ಓದಿ: ಕಟ್ಟಡಗಳ ತೆರಿಗೆ ಭಾರೀ ಏರಿಕೆ – ಜಯಪುರದಲ್ಲಿ ವರ್ತಕರಿಂದ ಅಂಗಡಿ ಬಂದ್, ಸರ್ಕಾರದ ವಿರುದ್ಧ ಆಕ್ರೋಶ
Advertisement
Advertisement
ಉಚಿತ ಪ್ರಯಾಣ, ಹುಣ್ಣಿಮೆ, ಅಮಾವಾಸ್ಯೆ ಹಾಗೂ ಸಂಕ್ರಾತಿ ಹಬ್ಬದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಕೋಟ್ಯಂತರ ಹಣ, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗೃಹಜ್ಯೋತಿಗೆ ಫಿದಾ – ಬೆಸ್ಕಾಂಗೆ ಭೇಟಿ ನೀಡಿದ ತೆಲಂಗಾಣ ಅಧಿಕಾರಿಗಳು
30 ದಿನಗಳ ಅವಧಿಯಲ್ಲಿ ನಡೆದ ಎಣಿಕೆಯಲ್ಲಿ 2,16,34,614 ರೂ. ಸಂಗ್ರಹವಾಗಿದೆ. ಇದರೊಂದಿಗೆ 78 ಗ್ರಾಂ ಚಿನ್ನ ಮತ್ತು 2.35 ಕೆಜಿ ಬೆಳ್ಳಿ ಸಹ ಸಂಗ್ರಹವಾಗಿದೆ. ಅಲ್ಲದೆ ಈ ಬಾರಿ ವಿದೇಶಿ ಕರೆನ್ಸಿಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿದೆ. 4 ಅಮೆರಿಕನ್ ಡಾಲರ್, ಅಫ್ಘಾನಿಸ್ತಾನದ 10 ಅಫ್ಗಾನಿ, ಮಲೆಷ್ಯಾದ 3 ರಿಂಗಿಟ್, ನೇಪಾಳದ ಮೂರು ನೋಟುಗಳು ಪತ್ತೆಯಾಗಿದೆ. ಜೊತೆಗೆ ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ 12 ನೋಟುಗಳು ಸಹ ಹುಂಡಿಯಲ್ಲಿ ಸಿಕ್ಕಿವೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್ ಬೋರ್ಡ್ ತಯಾರಿ