ಬೆಂಗಳೂರು: ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ಮುಂದಿನ 5 ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಶುಕ್ರವಾರ ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಶನಿವಾರದಿಂದ 4 ದಿನಗಳವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿ ಸಮುದ್ರ ತೀರದಲ್ಲಿ ಬಿರುಗಾಳಿ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪ್ರತಿ ಗಂಟೆಗೆ 45-55 ಕಿ.ಮೀ ವೇಗದಲ್ಲಿ, ಕೆಲವೊಮ್ಮೆ 65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
Advertisement
Advertisement
ಉತ್ತರ ಒಳನಾಡಿನಲ್ಲೂ ಮುಂದಿನ 5 ದಿನ ಮಳೆ ಸಾಧ್ಯತೆಯಿದ್ದು, ಮುಂದಿನ 3 ದಿನ ಬೆಳಗಾವಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲೂ ಮುಂದಿನ 4 ದಿನ ಮಳೆ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ. ಇದನ್ನೂ ಓದಿ: ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
Advertisement
ಹವಾಮಾನ ಇಲಾಖೆಯ ಮಳೆ ವರದಿಯ ಪ್ರಕಾರ ಕರಾವಳಿಯ 9 ಕಡೆ ಭಾರೀ ಮಳೆ ದಾಖಲಾಗಿದೆ. ಉತ್ತರ ಒಳನಾಡಿನ 2 ಕಡೆ ಭಾರೀ ಮಳೆ ವರದಿಯಾಗಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ನೋಟಾದಲ್ಲಿ 10 ಸೆ.ಮೀ, ಬೆಳಗಾವಿ ಜಿಲ್ಲೆಯ ಗುಂಜೆಯಲ್ಲಿ 7 ಸೆ.ಮೀ ಮಳೆ ದಾಖಲಾಗಿದೆ.
Advertisement
ದಕ್ಷಿಣ ಒಳನಾಡಿನ 1 ಕಡೆ ಭಾರೀ ಮಳೆ ದಾಖಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 24 ಸೆ.ಮೀ ಮಳೆ ದಾಖಲಾಗಿದೆ. ದಕ್ಷಿಣ ಭಾರತದ 3 ಕಡೆ ಭಾರೀ ಮಳೆ ದಾಖಲಾಗಿದ್ದು, ಕೊಡಗು ಜಿಲ್ಲೆಯ ಭಾಗಮಂಡಲ 20 ಸೆ.ಮೀ, ಹಾಸನ ಜಿಲ್ಲೆಯ ಸಕಲೇಶಪುರ 13 ಸೆ.ಮೀ, ಕೊಡಗು ಜಿಲ್ಲೆಯ ಹುದಕೇರಿಯಲ್ಲಿ 12 ಸೆ.ಮೀ ಮಳೆ ದಾಖಲಾಗಿದೆ. ಇದನ್ನೂ ಓದಿ: ರಾಷ್ಟ್ರ ಮಟ್ಟದ ಗಾಳಿಪಟ ಉತ್ಸವ – ಬಾನಂಗಳದಲ್ಲಿ ಹಾರಲಿದೆ ಹರ್ಷ ಗಾಳಿಪಟ
ಇಂದು ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ನಾಳೆ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.