ರಾಜ್ಯದಲ್ಲಿ ವರುಣಾರ್ಭಟ – ರಾಜಧಾನಿಗೆ 2 ದಿನ ಯೆಲ್ಲೋ ಅಲರ್ಟ್

Public TV
1 Min Read
rain 5

ಬೆಂಗಳೂರು: ಮುಂಗಾರು ಪ್ರವೇಶಕ್ಕೆ ಮುನ್ನವೇ ರಾಜ್ಯದಲ್ಲಿ (Karnataka) ವರುಣಾರ್ಭಟ (Rain) ಹೆಚ್ಚಾಗಿದೆ. ಮಂಗಳವಾರ ತಡರಾತ್ರಿ ಅಬ್ಬರಿಸಿದ ಮಳೆಗೆ ಬೆಂಗಳೂರಿನ (Bengaluru) ಹಲವೆಡೆ ನಾನಾ ಅವಾಂತರ ಸೃಷ್ಟಿಯಾಗಿದೆ.

ಬಸವನಗುಡಿಯಲ್ಲಿ ವಿದ್ಯುತ್ ಕಂಬ, ಮರವೊಂದು ಧರೆಗುರುಳಿದೆ. 3 ವಾಹನಗಳಿಗೆ ಹಾನಿಯಾಗಿದೆ. ಮರ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಮಲನಗರದಲ್ಲಿ ಮರಬಿದ್ದು ಹಲವು ಅಂಗಡಿ ಮುಂಗಟ್ಟು ಜಖಂ ಆಗಿವೆ.

rain 1 2

ಔಟರ್‌ರಿಂಗ್ ರೋಡ್‌ನಲ್ಲಿ ರಸ್ತೆ ಮೇಲೆ ಮೊಣಕಾಲುದ್ದ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ಹನೂರಿನ ಗೌಡನದೊಡ್ಡಿಯಲ್ಲಿ ಗಾಳಿಮಳೆಗೆ ಕೊಟ್ಟಿಗೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ಅಪಾರ ಬೆಳೆ ಹಾನಿಯಾಗಿವೆ.

ಬುಧವಾರ ರಾತ್ರಿ ಮತ್ತು ಗುರುವಾರ ರಾಜ್ಯಾದ್ಯಂತ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ನಗರದಲ್ಲಿ 2 ದಿನ ಯೆಲ್ಲೋ ಅಲರ್ಟ್ ಪ್ರಕಟಿಸಿದೆ. ಇದನ್ನೂ ಓದಿ: ಗಾಳಿಯ ಹೊಡೆತಕ್ಕೆ ಕಿತ್ತೇ ಹೋಯ್ತು ಟೋಲ್ ಗೇಟ್‌ನ ಮೇಲ್ಛಾವಣಿ

Share This Article