ಕೊಡಗಿನಲ್ಲಿ ವರುಣನ ಸಿಂಚನ- ಕಾಫಿ ಬೆಳೆಗಾರರಲ್ಲಿ ಮಂದಹಾಸ

Public TV
1 Min Read
KODAGU RAIN

ಮಡಿಕೇರಿ: ಕಳೆದ ಕಲವು ದಿನಗಳಿಂದ ರಾಜ್ಯಾದ್ಯಂತ ಜನ ಬಿಸಿಲಿನಿಂದ ಹೈರಾಣಾಗಿದ್ದು, ಸದ್ಯ ಅಲ್ಲಲ್ಲಿ ಮಳೆಯಾಗುತ್ತಿದೆ. ಅದರಂತೆ ಚಿಕ್ಕಮಗಳೂರು, ಬೀದರ್‌ ಆಯ್ತು ಇಂದು ಕೊಡಗಿನಲ್ಲಿ (rain In Kodagu) ವರುಣ ತಂಪೆರೆದಿದ್ದಾನೆ.

ಹೌದು. ಬಿಸಿಲ ಬೇಗೆಯಿಂದ ಬೆಸತ್ತಿದ್ದ ಕೊಡಗಿಗೆ ವರುಣನ ಸಿಂಚನವಾಗಿದೆ. ಮಡಿಕೇರಿ ತಾಲೂಕಿನ ಕುಜಿಲಗೇರಿ, ಬೊಳ್ಳುಮಾಡು ಹಾಗೂ ವಿರಾಜಪೇಟೆ ತಾಲೂಕಿನ ಕರಡ ಸೇರಿದಂತೆ ಹಲವಾರು ಗ್ರಾಮೀಣ ಭಾಗದಲ್ಲಿ ಮಳೆಯಾಗಿದೆ.

ಅರ್ಧ ಗಂಟೆಗೂ‌ ಹೆಚ್ಚು ಸಮಯ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟ ಜನ ಹಾಗೂ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದರೆ, ಇತ್ತ ಅಕಾಲಿಕ ಮಳೆಗೆ ವಾಹನ ಸವಾರರು ಕಿರಿ ಕಿರಿ ಅನುಭವಿಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ- ನಾನಾ ಅವಾಂತರ ಸೃಷ್ಠಿ

ನಿನ್ನೆಯಷ್ಟೇ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಕ್ಲಿ ಗ್ರಾಮದಲ್ಲಿ ಭಾರೀ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿ ಅವಾಂತರ ಸೃಷ್ಠಿಯಾಗಿತ್ತು. ಯಾರೂ ಇಲ್ಲದ ವೇಳೆ ವಿದ್ಯುತ್ ಕಂಬ ನೆಲಕ್ಕುರುಳಿದ್ದರಿಂದ ದೊಡ್ಡ ಅನಾಹುತ ತಪ್ಪಿತ್ತು. ಅಲ್ಲದೇ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿತ್ತು.

Share This Article