– ಇನ್ನೂ 5 ದಿನ ಮಳೆಯಾಗೋ ಸಾಧ್ಯತೆ
ಬೆಂಗಳೂರು: ಗುರುವಾರ ಇಡೀ ದಿನ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ.
ನಗರದ ಬೊಮ್ಮನಹಳ್ಳಿ, ಬಿಟಿಎಮ್ ಲೇಔಟ್, ಸಂಪಂಗಿರಾಮನಗರದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. ಎಚ್‍ಎಸ್‍ಆರ್ ಬಡಾವಣೆ ರಸ್ತೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ವು. ಬಡಾವಣೆಯ 5, 6 ಮತ್ತು 7 ನೇ ಹಂತದಲ್ಲಿ ರಸ್ತೆ ಮೇಲೆಲ್ಲಾ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದ್ರು.
Advertisement
Advertisement
ಹೀಗಾಗಿ ತಡರಾತ್ರಿ ಎಚ್‍ಎಸ್‍ಆರ್ ಬಡವಾಣೆಗೆ ಎನ್‍ಡಿಎಫ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮೇಯರ್ ಸಂಪತ್ ರಾಜ್ ಭೇಟಿ ನೀಡಿದ್ರು. ರಸ್ತೆಗಳಲ್ಲಿ ಜಾಲವೃತಗೊಂಡಿದ್ದ ಮಳೆ ನೀರನ್ನು ತೆರವುಗಳಿಸುವಂತೆ ಸೂಚಿಸಿದ್ರು. ರಾತ್ರಿ 1 ಗಂಟೆಯವರೆಗೂ ಎನ್‍ಡಿಎಫ್ ತಂಡದವರು ನೀರು ತೆರವುಗೊಳಿಸಿದ್ರು. ಇನ್ನು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದಕ್ಕೆ ಜನ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
Advertisement
Advertisement
ಇನ್ನು ಪ್ರತಿ ಬಾರಿ ಮಳೆ ಬಂದಾಗಲೂ ಎಚ್‍ಎಸ್‍ಆರ್ ಬಡವಾಣೆಗಳಲ್ಲಿ ಇದೇ ರೀತಿ ನೀರು ತುಂಬುತ್ತಂತೆ. ಸಾಕಷ್ಟು ಬಾರಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ರು ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನೂತನ ಮೇಯರ್ ಇಲ್ಲಿಗೆ ಭೇಟಿ ನೀಡಿ ತರೆವುಗೊಳಿಸುತ್ತಿದ್ದಾರೆ. ಮುಂದೆ ಮತ್ತೆ ಈ ರೀತಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ರೆ ಸಾಕು ಅಂತಾರೆ ಸ್ಥಳೀಯರು.
ಇನ್ನೂ ಐದು ದಿನ ನಗರದಲ್ಲಿ ಮಳೆ ಆಗುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.